ಬೆಂಗಳೂರಿನಲ್ಲಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಬದುಕಿನ ಹಲವು ರಹಸ್ಯಗಳ ಬಿಚ್ಚಿಟ್ಟರು
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ರೆಡ್ಡಿಟ್ ಸಂವಾದದಲ್ಲಿ ತಮ್ಮ ನಾಯಕತ್ವದ ಅನುಭವ, ನೆಚ್ಚಿನ ನಾಯಕರು ಮತ್ತು ಯುವ ಆಟಗಾರರ ಬಗ್ಗೆ ಮಾತನಾಡಿದ್ದಾರೆ. ಧೋನಿ ಮತ್ತು ಗಂಗೂಲಿ ತಮ್ಮ ನೆಚ್ಚಿನ ನಾಯಕರು ಎಂದು ಹೇಳಿರುವ ಅವ...

ರೆಡ್ಡಿಟ್ ಸಂವಾದದಲ್ಲಿ ಪಾಲ್ಗೊಂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಾಯಕನಾಗಿದ್ದಾಗ ಆಡುವ ಬಳಗವನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ತಮಗಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ತಮ್ಮ ನೆಚ್ಚಿನ ನಾಯಕರು ಎಂದು ತಿಳಿಸಿರುವ ಅವರು, ದಕ್ಷಿಣ ಆಫ್ರಿಕಾದ ತೆಂಬಾ ಬವುಮಾ ಅವರ ನಾಯಕತ್ವವನ್ನೂ ಶ್ಲಾಘಿಸಿದ್ದಾರೆ. ಇನ್ನು 15 ವರ್ಷದ ವೈಭವ್ ಸೂರ್ಯವಂಶಿಗೆ ನಾಯಕತ್ವದ ಜವಾಬ್ದಾರಿ ನೀಡುವುದು ಆತುರದ ನಿರ್ಧಾರ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.




