ಮುಖ್ಯ ವಿಷಯಕ್ಕೆ ಹೋಗಿ
The Karnataka Today
17 Oct
ವಿಜ್ಞಾನ

ಈಜಿಪ್ಟ್‌ನ ಬೆಹ್‌ಬೀಟ್ ಎಲ್ ಹಾಗರ್‌ನಲ್ಲಿ ದೊರೆ ರಾಮ್ಸೆಸ್ II ನ ಬೃಹತ್ ಪ್ರತಿಮೆ ಪತ್ತೆ

ಈಜಿಪ್ಟ್‌ನ ಬೆಹ್‌ಬೀಟ್ ಎಲ್ ಹಾಗರ್ ಗ್ರಾಮದಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ರೈತನಿಗೆ ಪ್ರಸಿದ್ಧ ದೊರೆ ರಾಮ್ಸೆಸ್ II ನ ಬೃಹತ್ ಪ್ರತಿಮೆಗಳು ಪತ್ತೆಯಾಗಿವೆ. ಪುರಾತತ್ವ ತಜ್ಞರು ಸ್ಥಳದಲ್ಲಿ ಉತ್ಖನನ ನಡೆಸಿ 27 ಅಡಿ ಎತ್...

ಮನೆ ಮುಂದೆ ಜಮೀನು ಉಳುಮೆ ಮಾಡುವಾಗ ಸಿಕ್ಕಿತು ಅಪರೂಪದ ನಿಧಿ:  ಪತ್ತೆಯಾಯಿತು ಫೇರೋ ರಾಮ್ಸೆಸ್ II ನ ಬೃಹತ್ ಪ್ರತಿಮೆ!
ಹಂಚಿಕೊಳ್ಳಿ:

ಈಜಿಪ್ಟ್‌ನ ಘರ್ಬಿಯಾ ಪ್ರಾಂತ್ಯದ ಬೆಹ್‌ಬೀಟ್ ಎಲ್ ಹಾಗರ್ ಗ್ರಾಮದಲ್ಲಿ ರೈತನೊಬ್ಬ ಜಮೀನು ಉಳುಮೆ ಮಾಡುವಾಗ ಪುರಾತನ ಫೇರೋ ರಾಮ್ಸೆಸ್ II ನ 27 ಅಡಿ ಎತ್ತರದ ಪ್ರತಿಮೆಯ ಭಾಗಗಳು ಪತ್ತೆಯಾಗಿವೆ. ಇದರೊಂದಿಗೆ 8 ಅಡಿ ಎತ್ತರದ ಮತ್ತೊಂದು ಪ್ರತಿಮೆ ಹಾಗೂ ಸೂರ್ಯದೇವನ ಉಲ್ಲೇಖವಿರುವ 4 ಅಡಿ ಎತ್ತರದ ಗುಲಾಬಿ ಗ್ರಾನೈಟ್ ಕಲ್ಲಿನ ಬ್ಲಾಕ್ ದೊರೆತಿದೆ. ಈ ಮಹತ್ವದ ಶೋಧದ ಬಗ್ಗೆ ಈಜಿಪ್ಟ್‌ನ ಸುಪ್ರೀಂ ಕೌನ್ಸಿಲ್ ಆಫ್ ಆಂಟಿಕ್ವಿಟೀಸ್ ತಜ್ಞರು ಉತ್ಖನನ ಕೈಗೊಂಡಿದ್ದಾರೆ. ಪ್ರಾಚೀನ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿದ ರೈತನ ಪ್ರಾಮಾಣಿಕತೆಯನ್ನು ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಸಚಿವ ಶೆರಿಫ್ ಫಾಥಿ ಶ್ಲಾಘಿಸಿದ್ದಾರೆ.

ಹಂಚಿಕೊಳ್ಳಿ: