ವಿಜಯಲಕ್ಷ್ಮಿ ಆರೋಪಗಳಿಗೆ ಧನ್ವೀರ್ ಓಪನ್ ಚಾಲೆಂಜ್: ಆಡಿಯೋ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ
– ಶೀಘ್ರದಲ್ಲೇ ಆಡಿಯೋ ರಿಲೀಸ್ ಮಾಡ್ತೀನಿ ಅಂತಾ ಬಾಂಬ್ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿರುವ ಧನ್ವೀರ್, ತಮ್ಮ ಬಳಿ ಕೂಡ ಆ...

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ವಿವಾದ ತೀವ್ರಗೊಂಡಿದ್ದು, ತಮ್ಮ ವಿರುದ್ಧದ ಹಣಕಾಸಿನ ಆರೋಪಗಳನ್ನು ಸಾಬೀತುಪಡಿಸುವಂತೆ ಧನ್ವೀರ್ ಸವಾಲು ಹಾಕಿದ್ದಾರೆ. ತಮ್ಮ ಬಳಿ ಇರುವ ಆಡಿಯೋ ದಾಖಲೆಗಳನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ. ತಾವು ಮನೆಯಲ್ಲಿಲ್ಲದ ಸಮಯದಲ್ಲಿ ಮಹಿಳೆಯರಿರುವ ಮನೆಗೆ ಬಂದವರ ವರ್ತನೆಯನ್ನು ಧನ್ವೀರ್ ತೀವ್ರವಾಗಿ ಖಂಡಿಸಿದ್ದಾರೆ. ದರ್ಶನ್ ಅವರಿಗೆ ತೊಂದರೆಯಾಗಬಾರದೆಂದು ಇಷ್ಟು ದಿನ ಮೌನವಾಗಿದ್ದೆ, ಆದರೆ ಈಗ ಕಾನೂನು ಹೋರಾಟ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.




