ಉಚ್ಚಿಲ ದಸರಾ ಶೋಭಾಯಾತ್ರೆ: ಕಾಪು ದೀಪಸ್ತಂಭದ ಬಳಿ ಅ. 21ರಂದು ಜಲಸ್ತಂಭನ ಕಾರ್ಯಕ್ರಮ
ಆಕರ್ಷಕ ಟ್ಯಾಬ್ಲೊಗಳು, ಸಾಂಸ್ಕೃತಿಕ ಕಲಾತಂಡಗಳ ಮೆರುಗು; ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಉಡುಪಿ ಟೈಮ್ಸ್ ವರದಿ ಉಚ್ಚಿಲ: ಉಚ್ಚಿಲ ಶ್ರೀ... The post ಉಚ್ಚಿಲ ದಸರಾ ಶೋಭಾಯಾತ್ರೆಗೆ ಕ್ಷಣಗಣನೆ ಕಾಪು ದೀಪಸ್ತಂಭ...

ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಅ. 21ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆಯ ಬಳಿಕ ಆರಂಭವಾಗುವ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿ ಕಾಪು ದೀಪಸ್ತಂಭದ ಬಳಿ ತಲುಪಲಿದ್ದು, ಅಲ್ಲಿ ಜಲಸ್ತಂಭನ ಮತ್ತು ಗಂಗಾರತಿ ನೆರವೇರಲಿದೆ. ಈ ಉತ್ಸವದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸುಮಾರು 250 ಸ್ವಯಂಸೇವಕರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಟ್ಯಾಬ್ಲೊಗಳ ಮೆರವಣಿಗೆಯ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.




