ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಶಿವಮೊಗ್ಗ: ಕುಂದಗಸವಿ ಗ್ರಾಮದಲ್ಲಿ ಮದುವೆಯ ಅದ್ಧೂರಿ ಬೀಗರೂಟಕ್ಕೆ ನಿಷೇಧ

– ಸರಳ ಮದುವೆ ಸಂಪ್ರದಾಯಕ್ಕೆ ಒತ್ತು; ದುಂದುವೆಚ್ಚ ಕಡಿವಾಣಕ್ಕೆ ಗ್ರಾಮಸ್ಥರ ನಿರ್ಧಾರ ಶಿವಮೊಗ್ಗ: ಮದುವೆ ಸಮಾರಂಭಗಳ ಹೆಸರಿನಲ್ಲಿ ಹೆಚ್ಚುತ್ತಿರುವ ಅದ್ದೂರಿತನ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಬಡ ಮತ್ತು ಮಧ್ಯಮ...

· ಶಿವಮೊಗ್ಗ
ಶಿವಮೊಗ್ಗ | ದುಂದುವೆಚ್ಚಕ್ಕೆ ಕಡಿವಾಣ – ಅದ್ಧೂರಿ ಬೀಗರೂಟಕ್ಕೆ ಕುಂದಗಸವಿಯಲ್ಲೂ ಬ್ರೇಕ್
ಹಂಚಿಕೊಳ್ಳಿ:

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಂದಗಸವಿ ಗ್ರಾಮದ ಜನರು ಮದುವೆ ಸಮಾರಂಭಗಳಲ್ಲಿ ನಡೆಯುವ ಅತಿಯಾದ ಖರ್ಚು ಮತ್ತು ಅದ್ಧೂರಿ ಬೀಗರೂಟವನ್ನು ನಿಲ್ಲಿಸಲು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರತಿಷ್ಠೆಗಾಗಿ ಸಾಲ ಮಾಡಿ ಹಣ ವ್ಯಯಿಸುವುದನ್ನು ತಪ್ಪಿಸಿ, ಸರಳ ಮದುವೆಗಳನ್ನು ಉತ್ತೇಜಿಸುವ ಉದ್ದೇಶದಿಂದ ದೀವರು ಸಮುದಾಯದವರು ಈ ನಿರ್ಧಾರ ಕೈಗೊಂಡಿದ್ದಾರೆ. ಉಳಿತಾಯದ ಹಣವನ್ನು ಶಿಕ್ಷಣ ಮತ್ತು ಕುಟುಂಬದ ಅಭಿವೃದ್ಧಿಗೆ ಬಳಸಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇದೇ ರೀತಿಯ ಸಾಮಾಜಿಕ ಬದಲಾವಣೆಯು ತಾಲೂಕಿನ ಚಿಕ್ಕಶಕುನ, ಸೀಗೆಹಳ್ಳಿ ಮತ್ತು ನೆಗವಾಡಿ ಗ್ರಾಮಗಳಲ್ಲೂ ಕಂಡುಬರುತ್ತಿದ್ದು, ಅದ್ದೂರಿ ಕಾರ್ಯಕ್ರಮಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ.

ಹಂಚಿಕೊಳ್ಳಿ: