ಮುಖ್ಯ ವಿಷಯಕ್ಕೆ ಹೋಗಿ
The Karnataka Today
15 Oct
ಸುದ್ದಿ
ಸುದ್ದಿ

ಸಂಜೀವಿನಿ ಗೋಧಾಮ ರೈತಪೀಠ ಪ್ರಶಸ್ತಿ: ಸಮಾಲೋಚನಾ ಸಭೆ

ರೈತಪೀಠ ಪ್ರಶಸ್ತಿ ದಕ್ಷಿಣ ಭಾರತಕ್ಕೆ ವಿಸ್ತರಣೆ- 2027ರ ಜನವರಿಯಲ್ಲಿ ಪ್ರಶಸ್ತಿ ಪ್ರದಾನ ಹೆಬ್ರಿ : ಸಂಜೀವಿನಿ ಗೋಧಾಮದಲ್ಲಿ ಭಾನುವಾರ ರೈತಪೀಠ... The post ಸಂಜೀವಿನಿ ಗೋಧಾಮ ರೈತಪೀಠ ಪ್ರಶಸ್ತಿ: ಸಮಾಲೋಚನಾ ಸಭೆ firs...

· ಉಡುಪಿ
ಸಂಜೀವಿನಿ ಗೋಧಾಮ ರೈತಪೀಠ ಪ್ರಶಸ್ತಿ: ಸಮಾಲೋಚನಾ ಸಭೆ
ಹಂಚಿಕೊಳ್ಳಿ:

ಸಂಜೀವಿನಿ ಗೋಧಾಮದ ವತಿಯಿಂದ ನೀಡಲಾಗುವ ರಾಷ್ಟ್ರೀಯ ರೈತಪೀಠ ಪ್ರಶಸ್ತಿಯನ್ನು ಈ ಬಾರಿ ದಕ್ಷಿಣ ಭಾರತದ ಆರು ರಾಜ್ಯಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಡಾ.ಜಿ.ರಾಮಕೃಷ್ಣ ಆಚಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೂವರು ಪ್ರಗತಿಪರ ರೈತರನ್ನು ಆಯ್ಕೆ ಮಾಡಿ ತಲಾ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು. ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಉದ್ದೇಶದ ಈ ಪ್ರಶಸ್ತಿ ಪ್ರದಾನ ಹಾಗೂ ಕೃಷಿ ವಿಚಾರಗೋಷ್ಠಿಯನ್ನು 2027ರ ಜನವರಿಯಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹಂಚಿಕೊಳ್ಳಿ: