ಸಚಿವ ಖಂಡ್ರೆ ತವರಲ್ಲೇ ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರ್ ಮೇಲೆ ಹಲ್ಲೆ – ವಿಡಿಯೋ ವೈರಲ್
ಬೀದರ್: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ (Eshwar Khandre) ತವರಲ್ಲೇ ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರ್ ಮೇಲೆ ಗ್ರಾ.ಪಂ ಸದಸ್ಯ ಹಲ್ಲೆ ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಗುಡಪ...


ಬೀದರ್: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ (Eshwar Khandre) ತವರಲ್ಲೇ ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರ್ ಮೇಲೆ ಗ್ರಾ.ಪಂ ಸದಸ್ಯ ಹಲ್ಲೆ ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಡಪಳ್ಳಿ ಗ್ರಾ.ಪಂಚಾಯಿತಿಯ ಕರ್ತವ್ಯದಲ್ಲಿದ್ದ ಡಾಟಾ ಎಂಟ್ರಿ ಆಪರೇಟರ್ ಮಹದೇವ ಮೇಲೆ ಸದಸ್ಯ ಏಕಾಏಕಿ ಹಲ್ಲೆ ಮಾಡಿದ್ದಾನೆ. ಸದಸ್ಯನ ಕೆಲಸದ ಅವಧಿ ಮುಗಿದಿದ್ದರೂ ಕೂಡ ಕಚೇರಿ ಒಳಗಡೆ ನುಗ್ಗಿ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ.
ಹಲ್ಲೆಯಾಗಿರುವ ವಿಡಿಯೋ ವೈರಲ್ ಆಗಿದ್ದು, ಆದರೆ ವಿಡಿಯೋ ಒಂದು ವರ್ಷದ ಹಿಂದೆಯೇ ಹಲ್ಲೆಯಾಗಿದ್ದು ಎಂದು ತೋರಿಸುತ್ತಿದೆ. ಸದ್ಯ ಗ್ರಾ.ಪಂ ಅಧಿಕಾರಿಗಳು, ಸಿಬ್ಬಂದಿ ಹಳೆಯ ವಿಡಿಯೋವನ್ನು ಇದೀಗ ವೈರಲ್ ಮಾಡಿ, ಹಲ್ಲೆ ಮಾಡಿದ ಸದಸ್ಯನ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಹಲ್ಲೆಯಿಂದ ಗ್ರಾ.ಪಂ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಆತಂಕದ ಛಾಯೆ ಮನೆ ಮಾಡಿದ್ದು, ಈ ಕೂಡಲೇ ಹಲ್ಲೆ ಮಾಡಿದ ಸದಸ್ಯನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ವೈಯಕ್ತಿಕ ವಿಚಾರಕ್ಕೆ ಡಾಟಾ ಎಂಟ್ರಿ ಆಪರೇಟರ್ ಮೇಲೆ ಸದಸ್ಯ ಹಲ್ಲೆ ಆರೋಪ ಕೇಳಿ ಬಂದಿದೆ.
ಈ ಕುರಿತು ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಭಾವಿ ಪತಿಯನ್ನ ಪರಿಚಯಿಸಿದ ಬಿಗ್‌ಬಾಸ್ ಖ್ಯಾತಿಯ ಸ್ಪಂದನಾ ಸೋಮಣ್ಣ




