ಮುಖ್ಯ ವಿಷಯಕ್ಕೆ ಹೋಗಿ
The Karnataka Today
9 Oct
ಸುದ್ದಿ
ಸುದ್ದಿ

ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು

ಹುಬ್ಬಳ್ಳಿ: ನೀರಿನ ಸಂಪಿನಲ್ಲಿ (Sump) ಬಿದ್ದು 6 ವರ್ಷದ ಬಾಲಕ (Boy) ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಹುಬ್ಬಳ್ಳಿ ಉಣಕಲ್ ಗ್ರಾಮದ ಗಣೇಶ್ ಕಾಲೋನಿ ನಿವಾಸಿ ಸಿದ್ಧಾರ್ಥ್ ಮೃತ ದುರ್ದೈವಿ...

· ಧಾರವಾಡ
ನೀರಿನ ಸಂಪಿನಲ್ಲಿ ಬಿದ್ದು 6 ವರ್ಷದ ಬಾಲಕ ಸಾವು
ಹಂಚಿಕೊಳ್ಳಿ:

ಹುಬ್ಬಳ್ಳಿ: ನೀರಿನ ಸಂಪಿನಲ್ಲಿ (Sump) ಬಿದ್ದು 6 ವರ್ಷದ ಬಾಲಕ (Boy) ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.

ಹುಬ್ಬಳ್ಳಿ ಉಣಕಲ್ ಗ್ರಾಮದ ಗಣೇಶ್ ಕಾಲೋನಿ ನಿವಾಸಿ ಸಿದ್ಧಾರ್ಥ್ ಮೃತ ದುರ್ದೈವಿ. ಸಿದ್ಧಾರ್ಥ್ 1ನೇ ತರಗತಿ ಓದುತ್ತಿದ್ದ. ಬೆಳಗ್ಗೆ 9 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ನೀರು ತೆಗೆಯಲು ತೆರೆದಿದ್ದ ಸಂಪಿನಲ್ಲಿ ಆಯತಪ್ಪಿ ಬಾಲಕ ಬಿದ್ದಿದ್ದಾನೆ. ಬಾಲಕ ಬಿದ್ದಿದ್ದನ್ನು ಗಮನಿಸಿದ ತಂದೆ ನಾಗಪ್ಪ ರಕ್ಷಣೆಗೆ ಯತ್ನಿಸಿದ್ದು, ಕೂಡಲೇ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ.

ಸದ್ಯ ಕಿಮ್ಸ್ ಶವಾಗಾರಕ್ಕೆ ಸಿದ್ಧಾರ್ಥ್ ಮೃತದೇಹ ರವಾನಿಸಲಾಗಿದೆ. ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮರಣೋತ್ತರ ಪರೀಕ್ಷೆ ವಿಳಂಬಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದ ಕಾಯುತ್ತಿದ್ದರೂ ಇದುವರೆಗೆ ಪೋಸ್ಟ್‌ಮಾರ್ಟಂ ಮಾಡಿಲ್ಲ ಎಂದು ಆರೋಪಿಸಿದ್ದು, ವೈದ್ಯರು ಲಭ್ಯವಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಂಚಿಕೊಳ್ಳಿ: