ಮಂಗಳೂರು: ಸಮುದ್ರದಲ್ಲಿ ಬಿದ್ದ ಮೀನುಗಾರನನ್ನು ರಕ್ಷಿಸಿದ ಕರಾವಳಿ ರಕ್ಷಣಾ ಪಡೆ
ಮಂಗಳೂರು: ಇಲ್ಲಿಗೆ ಸಮೀಪದ ಅರಬ್ಬಿ ಸಮುದ್ರಕ್ಕೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಮೀನುಗಾರನಿಗೆ ಭಾನುವಾರ ಮಧ್ಯರಾತ್ರಿಯಲ್ಲೇ ತುರ್ತು ಚಿಕಿತ್ಸೆ ಒದಗಿಸಲು ಭಾರತೀಯ ಕರಾವಳಿ ರಕ್ಷಣಾ ಪಡೆ ನೆರವಾಯಿತು.ಮಂಗಳೂರಿನಿಂದ ಸುಮಾರು...

ಮಂಗಳೂರಿನಿಂದ 100 ಕಿ.ಮೀ ದೂರದಲ್ಲಿ ಶಿವ ಸಾಗರ್ ದೋಣಿಯ ಮೀನುಗಾರ ಕೊಮರ ರಾಮು ಬಲೆ ಎಳೆಯುವಾಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ದೋಣಿಯ ಸಹ ಮೀನುಗಾರರು ಕೂಡಲೇ ಅವರನ್ನು ಮೇಲಕ್ಕೆತ್ತಿದರೂ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತುರ್ತು ಸಂದೇಶದ ಮೇರೆಗೆ ಸ್ಥಳಕ್ಕೆ ಧಾವಿಸಿದ ಐಸಿಜಿಎಸ್ ಸಿ-448 ನೌಕೆಯು ಕತ್ತಲ ರಾತ್ರಿಯಲ್ಲೂ ಕಾರ್ಯಾಚರಣೆ ನಡೆಸಿ ದೋಣಿಯನ್ನು ಪತ್ತೆ ಮಾಡಿತು. ನೌಕೆಯ ಸಿಬ್ಬಂದಿ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ನವ ಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.




