ಮಡಿಕೇರಿ: ಸಿದ್ದಾಪುರದಲ್ಲಿ ಕೆರೆಗೆ ಕಾರು ಉರುಳಿ ಒಂದೇ ಕುಟುಂಬದ ಮೂವರು ಸಾವು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಕಾರು ಕೆರೆಗೆ ಉರುಳಿ ಬಿದ್ದ ಪರಿಣಾಮ ಪುಟ್ಟ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಸಿದ್ದಾಪುರ (Siddapura...

ಸಿದ್ದಾಪುರದಿಂದ ಬಾಣಂಗಾಲಕ್ಕೆ ತೆರಳುತ್ತಿದ್ದ ಕಾರು ಸೋಮವಾರ ರಾತ್ರಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ ವಿಜೇಶ್, ಪಮಿತ ಮತ್ತು ನಾಲ್ಕು ವರ್ಷದ ಲಿಯ ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತೋಟದ ಕೆಲಸಗಾರರು ಮಂಗಳವಾರ ಬೆಳಗ್ಗೆ ಕಾರನ್ನು ನೋಡಿ ವಿಷಯವನ್ನು ಹೊರಜಗತ್ತಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರು ಕೆರೆಗೆ ಬೀಳಲು ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.




