ಮಡಿಕೇರಿ: ಮಿದುಳು ನಿಷ್ಕ್ರಿಯಗೊಂಡ ಯುವಕ ಯೋಗೇಶ್ ಅಂಗಾಂಗ ದಾನದ ಮೂಲಕ ಮಾದರಿ
– ರಕ್ತದಾನ ಮಾಡಿ ಜೀವ ಉಳಿಸಿದ್ದ ಯುವಕನಿಂದ ಈಗ ಅಂಗಾಂಗ ದಾನ – ಮಗನ ಅಗಲಿಕೆಯ ನೋವಿನಲ್ಲೂ ಮಾನವೀಯತೆ ಮೆರೆದ ಕುಟುಂಬ ಮಡಿಕೇರಿ: ಅಂಗಾಂಗ ದಾನ ಮಾಡಿ ಮಡಿಕೇರಿಯ (Madikeri) ಯುವಕ ಯೋಗೇಶ್ ಸಾವಿನಲ್ಲೂ ಸಾರ್ಥಕತೆ ಮೆರೆದಿ...

ಮಡಿಕೇರಿಯ ಸಪ್ತಗಿರಿ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯೋಗೇಶ್ ಆಕಸ್ಮಿಕವಾಗಿ ಕುಸಿದು ಬಿದ್ದು ಮಿದುಳು ನಿಷ್ಕ್ರಿಯಗೊಂಡಿದ್ದರು. ಮಗನ ಅಗಲಿಕೆಯ ನೋವಿನಲ್ಲೂ ಆತನ ಕುಟುಂಬದವರು ಅಂಗಾಂಗ ದಾನಕ್ಕೆ ಮುಂದೆ ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವೈದ್ಯರ ತಂಡ ಯೋಗೇಶ್‌ನ ಲಿವರ್ ಮತ್ತು ಕಣ್ಣುಗಳನ್ನು ಸಂಗ್ರಹಿಸಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದೆ. ನಿರಂತರವಾಗಿ ರಕ್ತದಾನ ಮಾಡುತ್ತಿದ್ದ ಯೋಗೇಶ್, ಇದೀಗ ತನ್ನ ಅಂಗಾಂಗಗಳ ಮೂಲಕ ಹಲವರಿಗೆ ಹೊಸ ಬದುಕು ನೀಡಿದ್ದಾರೆ.




