ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಕುಂದಾಪುರ ಸಮೀಪದ ಅರಾಟೆ ಸೇತುವೆ ಬಳಿ ಎರಡು ಬಸ್ಸುಗಳ ನಡುವೆ ಅಪಘಾತ: 28 ಮಂದಿಗೆ ಗಾಯ

ಕುಂದಾಪುರ: ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು ಅವರ ಪೈಕಿ ಮೂವರಿಗೆ ಗಂಭೀರ... The post ಅರಾಟೆ ಸೇತುವೆ ಬಳಿ ಖಾಸಗಿ ಬಸ್ಸುಗಳು ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮ...

· ಉಡುಪಿ
ಅರಾಟೆ ಸೇತುವೆ ಬಳಿ ಖಾಸಗಿ ಬಸ್ಸುಗಳು ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರು ಗಂಭೀರ
ಹಂಚಿಕೊಳ್ಳಿ:

ಕುಂದಾಪುರದ ಅರಾಟೆ ಸೇತುವೆ ಬಳಿ ಭಾನುವಾರ ಬೆಳಿಗ್ಗೆ ಶ್ರೀ ದುರ್ಗಾಂಬ ಮತ್ತು ಗಣೇಶ್ ಎಂಬ ಎರಡು ಖಾಸಗಿ ಬಸ್ಸುಗಳು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಭೀಕರ ಅಪಘಾತದಲ್ಲಿ ಒಟ್ಟು 28 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಡಿಕ್ಕಿಯ ರಭಸಕ್ಕೆ ಶ್ರೀ ದುರ್ಗಾಂಬ ಬಸ್ಸು ತಿರುಗಿ ಹಿಂಬದಿಯಲ್ಲಿ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಆ ವಾಹನದ ಚಾಲಕನಿಗೂ ಗಾಯಗಳಾಗಿವೆ. ಸ್ಥಳೀಯ ಆಂಬುಲೆನ್ಸ್ ತಂಡಗಳು ಮತ್ತು ರಿಕ್ಷಾ ಚಾಲಕರು ಗಾಯಾಳುಗಳನ್ನು ಕೂಡಲೇ ಮಣಿಪಾಲ ಹಾಗೂ ಕುಂದಾಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಕುಂದಾಪುರ ಸಂಚಾರ ಠಾಣೆಯ ಪಿಎಸ್ಐ ಅನೂಪ್ ನಾಯಕ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹಂಚಿಕೊಳ್ಳಿ: