ಕೊಡಗು: ಮಳೆಯ ಅಬ್ಬರದಿಂದ ಹಾರಂಗಿ ಜಲಾಶಯಕ್ಕೆ 2,812 ಕ್ಯೂಸೆಕ್ ನೀರು
ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಜಿಲ್ಲೆಯ ಹಲವೆಡೆ ರಾತ್ರಿ ವೇಳೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಚುರುಕುಗೊಂಡಿದ...

ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯದ ಒಳಹರಿವಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಈ ಹಿಂದೆ 500ರಿಂದ 600 ಕ್ಯೂಸೆಕ್ ಇದ್ದ ಒಳಹರಿವು ಸದ್ಯ 2,812 ಕ್ಯೂಸೆಕ್‌ಗೆ ತಲುಪಿದೆ. ಒಟ್ಟು 8.5 ಟಿಎಂಸಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ 4.3 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಕೊರತೆಯಾಗಬಹುದೆಂದು ಆತಂಕಗೊಂಡಿದ್ದ ಸ್ಥಳೀಯರಿಗೆ ಈ ಮಳೆ ಸದ್ಯಕ್ಕೆ ಸಮಾಧಾನ ತಂದಿದೆ.




