ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಕೆಂಪೇಗೌಡ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ವೆಜ್ ಬಿರಿಯಾನಿಯಲ್ಲಿ ಪತ್ತೆಯಾದ ಚಿಕನ್

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಆಹಾರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಆತಂಕ ಮೂಡಿಸುವ ಘಟನೆ ನಡೆದಿದೆ. ಸಸ್ಯಾಹಾರಿ ಬಿರಿಯಾನಿ ಆರ್ಡರ್ ಮಾಡಿದ್ದ ಪ್ರಯಾಣಿಕನಿಗೆ ಅದರಲ್ಲಿ...

Bengaluru: ವೆಜ್ ಬಿರಿಯಾನಿ ಯಲ್ಲಿ ಕೋಳಿ ಮಾಂಸ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗ್ರಾಹಕರ ಧಾರ್ಮಿಕ ಭಾವನೆಗೆ ಧಕ್ಕೆ
ಹಂಚಿಕೊಳ್ಳಿ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೇಸ್ಟ್ ಆಫ್ ಇಂಡಿಯಾ ಇನ್ 11 ರೆಸ್ಟೋರೆಂಟ್‌ನಲ್ಲಿ ಪಿಯೂಷ್ ಅಗರ್ವಾಲ್ ಎಂಬ ಪ್ರಯಾಣಿಕರಿಗೆ ಸಸ್ಯಾಹಾರಿ ಬಿರಿಯಾನಿ ಬದಲು ಚಿಕನ್ ತುಂಡುಗಳು ಮಿಶ್ರಿತ ಆಹಾರ ದೊರೆತಿದೆ. ಸಸ್ಯಾಹಾರಿಗಳಾದ ತಮ್ಮ ಕುಟುಂಬದ ಧಾರ್ಮಿಕ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ ಎಂದು ಪ್ರಯಾಣಿಕ ಆರೋಪಿಸಿದ್ದು, ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮತ್ತು ರೆಸ್ಟೋರೆಂಟ್ ನಿರ್ವಹಣಾ ಸಂಸ್ಥೆಯಾದ ಎಚ್‌ಎಮ್‌ಎಸ್‌ಹೋಸ್ಟ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನಿಖೆಯನ್ನು ಕೈಗೊಂಡಿವೆ. ಆಹಾರದಲ್ಲಿ ಮಾಂಸದ ಅಂಶ ಇರುವುದನ್ನು ಒಪ್ಪಿಕೊಂಡಿರುವ ರೆಸ್ಟೋರೆಂಟ್ ಆಡಳಿತ ಮಂಡಳಿ, ಈ ಪ್ರಮಾದ ಹೇಗೆ ನಡೆಯಿತು ಎಂಬುದನ್ನು ಪತ್ತೆ ಹಚ್ಚುವುದಾಗಿ ತಿಳಿಸಿದೆ.

ಹಂಚಿಕೊಳ್ಳಿ: