ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಕಲಬುರಗಿ: ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾದ ಬಾಲಕಿ ವೈಷ್ಣವಿ ಧರಿ

ಬಡತನ, ಕಷ್ಟಗಳ ನಡುವೆಯೂ ಸಾಧನೆಯ ಕನಸು ಕಾಣುವವರಿಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕಲಬುರಗಿ ಜಿಲ್ಲೆಯ ವೈಷ್ಣವಿ ಧರಿ ಉತ್ತಮ ಉದಾಹರಣೆ. ಕೂಲಿ ಕೆಲಸ ಮಾಡಿ ಮಗಳನ್ನು ಓದಿಸುತ್ತಿರುವ ತಾಯಿಯ ಪರಿಶ್ರಮಕ್ಕೆ ಈಗ ಫಲ...

· ಕಲಬುರಗಿ
ತಾಯಿ ಕೂಲಿ ಕೆಲಸ, ಮಗಳ ಕೈಯಲ್ಲಿ ಕ್ರಿಕೆಟ್ ಬ್ಯಾಟ್! ಬಡತನ ಮೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಲಬುರಗಿ ಬಾಲಕಿ
ಹಂಚಿಕೊಳ್ಳಿ:

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದ ವೈಷ್ಣವಿ ಧರಿ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸುವ ಅಂಡರ್-17 ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ತಂದೆಯನ್ನು ಕಳೆದುಕೊಂಡಿರುವ ವೈಷ್ಣವಿ, ಕೂಲಿ ಕೆಲಸ ಮಾಡುವ ತಾಯಿ ಮುತ್ತಮ್ಮನ ಬೆಂಬಲದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾಳೆ. ಎನ್.ಎ ಕನ್ಯಾ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ, ಆಲ್‌ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾಳೆ. ತನ್ನ ಕೋಚ್‌ಗಳ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ವೈಷ್ಣವಿ, ಅಂತರರಾಷ್ಟ್ರೀಯ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಅವರಂತೆ ದೇಶಕ್ಕೆ ಕೀರ್ತಿ ತರುವ ಕನಸು ಹೊಂದಿದ್ದಾಳೆ.

ಹಂಚಿಕೊಳ್ಳಿ: