ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
– ಪೆಟ್ರೋಲ್ ಗಿಂತ ಎಥೆನಾಲ್ ಬೆಲೆಯೇ ಹೆಚ್ಚು; ಸಚಿವರ ಸ್ಪಷ್ಟನೆ – ಎಥೆನಾಲ್ ಮಿಶ್ರಣ ಪರೀಕ್ಷೆ ನಡೆಸಿದ ಲ್ಯಾಬ್ಗೆ ಮಾನ್ಯತೆಯೇ ಇಲ್ಲ ಎಂದ ಸಚಿವರು ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳ...

ಪೆಟ್ರೋಲ್ನಲ್ಲಿ ಶೇ.39ರಷ್ಟು ಎಥೆನಾಲ್ ಮಿಶ್ರಣವಿದೆ ಎಂಬ ರಾಜ್ಯ ಕಾಂಗ್ರೆಸ್ ಸರ್ಕಾರದ ಆರೋಪವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಳ್ಳಿಹಾಕಿದ್ದಾರೆ. ದೇಶದಲ್ಲಿ ಅಷ್ಟು ಪ್ರಮಾಣದ ಎಥೆನಾಲ್ ಉತ್ಪಾದನೆಯೇ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದ ಅವರು, ರಾಜ್ಯ ಸರ್ಕಾರ ನಡೆಸಿದ ಪರೀಕ್ಷೆಗಳು ಕಾನೂನುಬದ್ಧವಾಗಿಲ್ಲ ಹಾಗೂ ಅದಕ್ಕೆ ಬಳಸಲಾದ ಪ್ರಯೋಗಾಲಯಕ್ಕೆ ಮಾನ್ಯತೆಯೇ ಇಲ್ಲ ಎಂದು ದೂರಿದರು. ಪೆಟ್ರೋಲ್ ಬೆಲೆಗಿಂತ ಎಥೆನಾಲ್ ಬೆಲೆಯೇ ಹೆಚ್ಚಾಗಿದ್ದು, ರೈತರ ಹಿತ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.




