ಹುಬ್ಬಳ್ಳಿಯ ಯುವಕ ಭರತ್ ಯುರೋಪ್‌ನಲ್ಲಿ ಟ್ರಕ್ ಚಾಲಕನಾಗಿ ಗಳಿಸುತ್ತಿದ್ದಾರೆ ₹3 ಲಕ್ಷ ಸಂಬಳ
ವಿದೇಶದಲ್ಲಿ ಉದ್ಯೋಗ ಪಡೆಯಬೇಕು, ಕೈತುಂಬ ಸಂಬಳ ಸಂಪಾದಿಸಬೇಕು ಎಂಬುದು ಹಲವರ ಕನಸು. ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಕೆಲವರು ಸಾಕಷ್ಟು ಕಷ್ಟಪಡುತ್ತಾರೆ. ಅಂತಹವರ ಸಾಲಿಗೆ ಹುಬ್ಬಳ್ಳಿಯ 25 ವರ್ಷದ ಯುವಕ ಭರತ್ ಕೂಡ...

ಬಿಎ ಜರ್ನಲಿಸಂ ಪದವಿ ಪಡೆದ ಹುಬ್ಬಳ್ಳಿಯ 25 ವರ್ಷದ ಭರತ್, ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ವಿದೇಶಕ್ಕೆ ತೆರಳಿ ಲಿಥುವೇನಿಯಾದಲ್ಲಿ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಸುಮಾರು ₹8 ಲಕ್ಷ ಖರ್ಚು ಮಾಡಿದ್ದು, ಪ್ರಸ್ತುತ ತಿಂಗಳಿಗೆ 2,500 ಯುರೋ ಅಂದರೆ ಸುಮಾರು ₹3 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಯುರೋಪಿಯನ್ ದೇಶಗಳಲ್ಲಿ ಸರಕು ಸಾಗಣೆ ಮಾಡುವ ಇವರಿಗೆ ದಿನಕ್ಕೆ ಗರಿಷ್ಠ 9 ಗಂಟೆ ಕೆಲಸದ ಅವಧಿ ನಿಗದಿಪಡಿಸಲಾಗಿದೆ. ತಂದೆ-ತಾಯಿಯ ಆರೋಗ್ಯ ಮತ್ತು ಆರ್ಥಿಕ ಭದ್ರತೆಗಾಗಿ ಭರತ್ ವಿದೇಶದಲ್ಲಿ ನೆಲೆಸುವ ನಿರ್ಧಾರ ಕೈಗೊಂಡಿದ್ದಾರೆ.




