ಹೆಬ್ರಿಯಲ್ಲಿ ದುಶ್ಚಟ ಮುಕ್ತ ಸಮಾಜಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಜಾಥಾ.
ಧರ್ಮಸ್ಥಳ ಯೋಜನೆಯಿಂದ ಜನರ ಬದುಕು ಬದಲಾಗಿದೆ : ಮುದ್ರಾಡಿ ಮಂಜುನಾಥ ಪೂಜಾರಿ. ಹೆಬ್ರಿ : ದುಶ್ಚಟದಿಂದ ಮುಕ್ತವಾದರೆ ಇಡೀ ಕುಟುಂಬವೇ ನೆಮ್ಮದಿಯಿಂದ ಇರುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರ...

ಧರ್ಮಸ್ಥಳ ಯೋಜನೆಯಿಂದ ಜನರ ಬದುಕು ಬದಲಾಗಿದೆ : ಮುದ್ರಾಡಿ ಮಂಜುನಾಥ ಪೂಜಾರಿ.
ಹೆಬ್ರಿ : ದುಶ್ಚಟದಿಂದ ಮುಕ್ತವಾದರೆ ಇಡೀ ಕುಟುಂಬವೇ ನೆಮ್ಮದಿಯಿಂದ ಇರುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರ ಬದುಕು ಬದಲಾಗಿದೆ. ಸರ್ಕಾರಗಳಿಗೆ ಮಾಡಲಾಗದ ಕೆಲಸಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಮಾಡುತ್ತಿದೆ. ಬದಕಿನ ಪಾಠವನ್ನು ಕಲಿಸಿವೆ. ಯೋಜನೆಯ ಕಾರ್ಯವನ್ನು ಸರ್ಕಾರಗಳೇ ಮೆಚ್ಚಿವೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು. ಅವರು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ಹೆಬ್ರಿ ಮತ್ತು ಬ್ರಹ್ಮಾವರ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹೆಬ್ರಿ ಬ್ರಹ್ಮಾವರ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೆಬ್ರಿ ಬ್ರಹ್ಮಾವರ ತಾಲ್ಲೂಕು, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಸಿಂಡಿಕೇಟ್‌ವ್ಯವಸಾಯ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಇದರ ಸಹಯೋಗದಲ್ಲಿ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಗಾಂಧಿಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಗ್ರಾಮಗಳ ಉನ್ನತಿಯಾಗಬೇಕು, ಆ ಮೂಲಕ ರಾಮರಾಜ್ಯವಾಗುತ್ತದೆ ಎನ್ನುವ ಕನಸಸನ್ನು ಮಹಾತ್ಮ ಗಾಂಧೀಜಿ ಕಂಡಿದ್ದರು. ಗಾಂಧೀಜಿ ಕಂಡ ಕನಸನ್ನು ಗ್ರಾಮಾಭಿವೃದ್ಧಿಯ ಮೂಲಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನನಸು ಮಾಡುತ್ತಿದ್ದಾರೆ, ನವಜೀವನ ಸಮಿತಿಯ ಮೂಲಕ ಸಾವಿರಾರು ಕುಟುಂಬಗಳು ಮತ್ತೇ ಜೀವನದ ಬೆಳಕು ಕಂಡು ನವಜೀವನವನ್ನು ನಡೆಸುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ನಮಗೂ ದೊಡ್ಡ ಪ್ರೇರಣೆ, ಕ್ಷೇತ್ರದ ಯೋಜನೆಯ ಸಂಪರ್ಕದಿಂದ ನಮ್ಮ ಜೀವನದಲ್ಲಿಯೂ ಹಲವು ಮಹತ್ವದ ಬದಲಾವಣೆಗಳು ಆಗಿದೆ. ಕ್ಷೇತ್ರವು ಜನರ ಒಳಿತನ್ನು ಬಯಸಿ ಜನಸೇವೆಯನ್ನು ಮಾಡುತ್ತಿದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಮೂಡುಗಿಳಿಯಾರು ಬ್ರಹ್ಮಾವರದ ಜನಸೇವಾ ಟ್ರಸ್ಟ್‌ಅಧ್ಯಕ್ಷ ವಸಂತ ಗಿಳಿಯಾರು ಆಶಯ ಭಾಷಣ ಮಾಡಿ ನಮಗೆ ಬಲವಾದ ಇಛ್ಚಾಶಕ್ತಿ ಇದ್ದಾಗ ಮಾತ್ರ ನಮಗೆ ಅತ್ಯುತ್ತಮವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಜನರ ಜೀವನವನ್ನು ಬದಲಿಸಿ ಅತ್ಯುತ್ತಮ ಜೀವನ ನಡೆಸುವ ಪಾಠವನ್ನು ಕಲಿಸಿದೆ, ಇದರಿಂದಾಗಿ ಸಾವಿರಾರು ಕುಟುಂಬಗಳು ಸನ್ಮಾರ್ಗದಲ್ಲಿ ನಡೆದು ನೆಮ್ಮದಿಯ ಜೀವನವನ್ನು ನಡೆಸುತ್ತಿವೆ. ಯೋಜನೆಯ ಮೂಲಕ ದೇಶವ್ಯಾಪಿಯಾಗಿ ಸಮಾಜದ ಅಭ್ಯಧಯಕ್ಕಾಗಿ ಸೇವೆ ಮಾಡುವ ಸಂಸ್ಥೆ ಇದ್ದರೆ ಅದು ಶ್ರೀಕ್ಷೇತ್ರ ಧರ್ಮಸ್ಥಳ ಎಂದು ಎಂದು ಪ್ರಶಂಸಿದರು.
ಎರಡು ತಾಲ್ಲೂಕಿನ ರೈತರಿಗಾಗಿ ಅಂದು ಆರಂಭಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಇಂದು ಜನರ ಬದುಕಿನ ಭಾಗವಾಗಿ ವಿಶ್ವದೆತ್ತರಕ್ಕೆ ಬೆಳೆದಿದೆ. ಎಲ್ಲರ ಜೀವನದಲ್ಲೂ ಮೂಡಿಸುವ ಕಾರ್ಯವನ್ನು ಧರ್ಮಸ್ಥಳ ಕ್ಷೇತ್ರ ಮಾಡಿದೆ. ಗಾಂಧೀಜಿ ಕನಸು ಕೂಡ ನನಸು ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಹೆಬ್ರಿ ತಾಲ್ಲೂಕು ಅಧ್ಯಕ್ಷ ವಾದಿರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಮೂಲಕ ಜನರ ಜೀವನ ಬದಲಾಗಿ ಜನ ನೆಮ್ಮದಿಯನ್ನು ಕಾಣುವಾಗ ಖುಷಿಯಾಗುತ್ತದೆ, ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಜಾಥಾವನ್ನು ಯಶಸ್ವಿಗೊಳಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಪಾನಮುಕ್ತ ಕುಟುಂಬದ ಸದಸ್ಯೆ ಹೆರ್ಮುಂಡೆಯ ಸುರಕ್ಷಾ ಮತ್ತು ನವಜೀವನ ಸಮಿತಿ ಸದಸ್ಯ ಸುರೇಶ್ ಮಡಿವಾಳ್, ಮಂಜುನಾಥ ನಾಯ್ಕ್ ನವಜೀವನದ ಅನಿಸಿಕೆ ವ್ಯಕ್ತಪಡಿಸಿದರು. 150ಕ್ಕೂ ಹೆಚ್ಚು ಮಂದಿ ನವಜೀವನ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು.
ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಿಂದ ನಡೆದ ಜನಜಾಗೃತಿಯ ಬೃಹತ್ ಜಾಥಾಕ್ಕೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ಪ್ರಸಾದ್ ಹೆಗ್ಡೆ ಮಾರಾಳಿ ಚಾಲನೆ ನೀಡಿದರು.
ಧಾರ್ಮಿಕ ಮುಖಂಡ ಹೆಬ್ರಿ ಭಾಸ್ಕರ ಜೋಯಿಸ್, ಹೆಬ್ರಿ ಸಬ್‌ಇನ್ಸ್‌ಫೆಕ್ಟರ್ ಲೋಹಿತ್ ಕುಮಾರ್, ಹೆಬ್ರಿ ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗಾರಾಜ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷರಾದ ಪ್ರಕಾಶ ಶೆಟ್ಟಿ ಬ್ರಹ್ಮಾವರ, ಅಚ್ಚುತ್ತ ಪೂಜಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಹರೀಶ ಶೆಟ್ಟಿ ಚೇರ್ಕಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು, ಗಣ್ಯರು,ಅಧಿಕಾರಿ,ಸದಸ್ಯರು ಸೇರಿ ಸಾವಿರಾರು ಮಂದಿ ಸಮಾವೇಶಕ್ಕೆ ಸಾಕ್ಷಿಯಾದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕಿನ ಯೋಜನಾಧಿಕಾರಿ ರೇಷ್ಮಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಪ್ರಕಾಶ ಪೂಜಾರಿ ಮಾತಿಬೆಟ್ಟು ಹಾಗೂ ಮೇಲ್ವೀಚಾರಕ ಉಮೇಶ್ ಬಿಕೆ ನಿರೂಪಿಸಿದರು. ಬ್ರಹ್ಮಾವರ ತಾಲ್ಲೂಕಿನ ಯೋಜನಾಧಿಕಾರಿ ರಮೇಶ್ ವಂದಿಸಿದರು.





