ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಧರ್ಮಸ್ಥಳದ ಮಣ್ಣಸಂಕ ಕಾಡಿನಲ್ಲಿ ಸೌಜನ್ಯ ಹತ್ಯೆ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ

ಮಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ (Soujanya Case) ಪ್ರಕರಣದ ಮರುತನಿಖೆ ಆರಂಭವಾಗಿದೆ. ಧರ್ಮಸ್ಥಳದ ಕಾಡಿಗೆ ಎಸ್‌ಐಟಿ (SIT) ಎಂಟ್ರಿ ಕೊಟ್ಟಿದ್ದು, ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಭೇಟಿ ನೀಡಿದೆ. 14 ವರ್ಷದ...

· ದಕ್ಷಿಣ ಕನ್ನಡ
ಧರ್ಮಸ್ಥಳದ ಕಾಡಿಗೆ SIT ಎಂಟ್ರಿ – ಸೌಜನ್ಯ ಮೃತದೇಹ ಸಿಕ್ಕ ಜಾಗಕ್ಕೆ ಭೇಟಿ
ಹಂಚಿಕೊಳ್ಳಿ:

14 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು ಮರುತನಿಖೆ ಆರಂಭಿಸಿದೆ. ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದ ತಂಡವು ಧರ್ಮಸ್ಥಳದ ಮಣ್ಣಸಂಕ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿತು. ಸೌಜನ್ಯಳ ಮೃತದೇಹ ಪತ್ತೆಯಾಗಿದ್ದ ಜಾಗದಲ್ಲಿ ಘಟನೆಯ ಮರುಸೃಷ್ಟಿಯನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಮೃತಳ ಕುಟುಂಬದವರಾದ ಪುರಂದರಗೌಡ ಮತ್ತು ತುಕಾರಾಂ ಅವರಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಕಾರ್ಯಾಚರಣೆಯಲ್ಲಿ ಎಫ್‌ಎಸ್‌ಎಲ್ ತಜ್ಞರು, ವೈದ್ಯರು ಮತ್ತು ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.

ಹಂಚಿಕೊಳ್ಳಿ: