ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳು ನಾಲ್ಕು ಬಾರಿ ಸ್ಥಾನ ಬದಲಿಸಿವೆ ಎಂದು ಅಧ್ಯಯನ ವರದಿ
ಭೂಮಿಯ ಅಧ್ಯಯನದಲ್ಲಿ ಅಚ್ಚರಿ ಮಾಹಿತಿಯೊಂದು ಬಯಲಾಗಿದೆ. ಭೂಮಿ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಸ್ಥಾನ ಬದಲಿಸಿರುವ ಮಾಹಿತಿ ಲಭ್ಯವಾಗಿದೆ. ಇದರಿಂದ ಆಗುತ್ತಿರುವ ಪರಿಣಾಮದ ಕುರಿತು ಅಧ್ಯಯನ ವಿವರಿಸಿದೆ.

ಕಳೆದ 320 ದಶಲಕ್ಷ ವರ್ಷಗಳಲ್ಲಿ ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳು ನಾಲ್ಕು ಬಾರಿ ತಮ್ಮ ಸ್ಥಾನಗಳನ್ನು ಬದಲಿಸಿಕೊಂಡಿವೆ ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ. ಟ್ರು ಪೋಲಾರ್ ವ್ಯಾಂಡರ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ವರ್ಷಕ್ಕೆ 10 ಸೆಂಟಿಮೀಟರ್ ವೇಗದಲ್ಲಿ ನಡೆಯುತ್ತದೆ ಎಂದು ಅಕ್ಟೋಬರ್ 19 ರಂದು ಸ್ಮಿತ್‌ಸೋನಿಯನ್ ಮ್ಯಾಗಜಿನ್‌ನಲ್ಲಿ ಪ್ರಕಟವಾದ ವರದಿ ತಿಳಿಸಿದೆ. ಧ್ರುವಗಳ ಈ ಚಲನೆಯು ಸಮುದ್ರ ಮಟ್ಟದಲ್ಲಿ ಗಮನಾರ್ಹ ಏರಿಳಿತಗಳಿಗೆ ಕಾರಣವಾಗುತ್ತದೆ ಮತ್ತು ಇದು ನೈಸರ್ಗಿಕ ಬದಲಾವಣೆಗಳ ಮೇಲೆ ಪ್ರಭಾವ ಬೀರುತ್ತದೆ. ಕೊನೆಯ ಬಾರಿಗೆ ಇಂತಹ ಬದಲಾವಣೆಯು ಸುಮಾರು 48 ರಿಂದ 56 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.




