ಬೆಂಗಳೂರು: ಅಕ್ಟೋಬರ್ 31ಕ್ಕೆ ಗೃಹ ಜ್ಯೋತಿ ಸಮೀಕ್ಷೆ ಅಂತ್ಯ, ಗಡುವು ವಿಸ್ತರಣೆಯಿಲ್ಲ
ಬೆಂಗಳೂರು: ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ (Gruhajyothi) ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅಕ್ಟೋಬರ್ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆ...

ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಯು ಅಕ್ಟೋಬರ್ 31ರಂದು ಕೊನೆಗೊಳ್ಳಲಿದೆ. ಈವರೆಗೆ ಒಟ್ಟು 74,29,773 ಗ್ರಾಹಕರಲ್ಲಿ ಶೇ. 98.49ರಷ್ಟು ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಅಥವಾ ಮನೆಗೆ ಬೀಗ ಹಾಕಿದ್ದ ಕಾರಣದಿಂದ ಬಾಕಿ ಉಳಿದಿರುವ ಗ್ರಾಹಕರು ಕೂಡಲೇ ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ನಿಗದಿಪಡಿಸಿದ ಗಡುವನ್ನು ಮುಂದಕ್ಕೆ ವಿಸ್ತರಿಸಲಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.




