ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯ ಹತ್ಯೆ: ಆರೋಪಿಯ ಬ್ರೈನ್ ವಾಷ್‌ಗೆ ಬಲಿಯಾದ ಮಗಳು
– ಬೆಂಗ್ಳೂರು ಡೆಡ್ಲಿ ಮರ್ಡರ್ ಕೇಸ್ ಬಗ್ಗೆ ಪೊಲೀಸ್ ಆಯುಕ್ತರ ಹೇಳಿಕೆ ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸುವಂತ ಹತ್ಯಾಕಾಂಡ ನಡೆದಿದೆ. ಕ್ಯಾಬ್ ಡ್ರೈವರ್ (Cab Driver) ಒಂದೇ ಕುಟುಂಬದ 7 ಮಂದಿಯನ್ನ...

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಸೇರಿದಂತೆ ಏಳು ಮಂದಿ ಸಂಬಂಧಿಕರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಕೃತ್ಯದಲ್ಲಿ ಆರೋಪಿಯ 7 ವರ್ಷದ ಮಗಳು ಕೂಡ ಸಾಥ್ ನೀಡಿದ್ದು, ಆಕೆಗೆ ತಂದೆ ಬ್ರೈನ್ ವಾಷ್ ಮಾಡಿದ್ದನೆಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕಳೆದ 15 ರಿಂದ 20 ದಿನಗಳ ಅಂತರದಲ್ಲಿ ಈ ಹತ್ಯೆಗಳು ನಡೆದಿದ್ದು, ನವೆಂಬರ್ 3 ರಂದು ಶ್ರೀರಾಂಪುರ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು. ಸದ್ಯ ರಾಜಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಮಗುವೊಂದನ್ನು ರಕ್ಷಿಸಿದ್ದಾರೆ. ಆರೋಪಿಯ ಮೇಲೆ ಈ ಹಿಂದೆ ಮಾದನಾಯಕನಹಳ್ಳಿಯಲ್ಲಿ ಸರಗಳ್ಳತನದ ಪ್ರಕರಣ ದಾಖಲಾಗಿತ್ತು.




