ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಂಗಳೂರಿನ ಶ್ರೀರಾಂಪುರದಲ್ಲಿ ಪತ್ನಿ ಸೇರಿ 7 ಜನರ ಬರ್ಬರ ಹತ್ಯೆ: ಅಪ್ರಾಪ್ತ ಮಗಳೂ ಭಾಗಿ

ಬೆಂಗಳೂರು: ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಕೊಲೆಗೈದ ಹಂತಕನ ಟ್ರೇಸಿಂಗ್‌ ವೇಳೆ ಕಾರಿನಲ್ಲಿ ಸಿಕ್ಕ ಬಾಲಕ, (Bengaluru Crime) ಆರ...

· ಬೆಂಗಳೂರು ನಗರ
7 ಜನರ ಕೊಲೆಗೆ ಅಪ್ರಾಪ್ತ ಮಗಳ ಸಾಥ್‌ – ಹಂತಕನಿಂದ ಜಸ್ಟ್‌ಮಿಸ್‌ ಆದ ಬಾಲಕ ಹೇಳಿದ್ದೇನು?
ಹಂಚಿಕೊಳ್ಳಿ:

ಬೆಂಗಳೂರಿನ ಶ್ರೀರಾಂಪುರದಲ್ಲಿ ಇಂದುಶೇಖರ್ ಎಂಬಾತ ತನ್ನ ಪತ್ನಿ, ಅತ್ತೆ, ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆಯರು ಹಾಗೂ 7 ವರ್ಷದ ಮಗ ಸೇರಿ ಏಳು ಜನರನ್ನು ಹತ್ಯೆ ಮಾಡಿದ್ದಾನೆ. ಪತ್ನಿಯೊಂದಿಗೆ ಇದ್ದ ವೈಮನಸ್ಸಿನಿಂದಾಗಿ ಆಕೆಯ ಕುಟುಂಬದವರೇ ತನ್ನ ಜೀವನಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾನೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಯ 17 ವರ್ಷದ ಮಗಳು ಕೂಡ ಸಾಥ್ ನೀಡಿದ್ದಾಳೆ. ಕೊಲೆಗೈದ ಬಳಿಕ ಮೃತದೇಹಗಳನ್ನು ಗೋಣಿಚೀಲದಲ್ಲಿ ಕಟ್ಟಿ ವಿವಿಧೆಡೆ ಎಸೆದಿದ್ದು, ಈ ವೇಳೆ ಆರೋಪಿಯ ಜೊತೆಯಲ್ಲಿದ್ದ 13 ವರ್ಷದ ಬಾಲಕನೊಬ್ಬ ಘಟನೆಯ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಸದ್ಯ ಪೊಲೀಸರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು ತನಿಖೆ ಮುಂದುವರಿದಿದೆ.

ಹಂಚಿಕೊಳ್ಳಿ: