ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಹಾಸನಕ್ಕೆ ತೆರಳಲು ಪ್ರಯಾಣಿಕರ ದಟ್ಟಣೆ
ಬೆಂಗಳೂರು: ಒಂದು ಕಡೆ ವಾರಾಂತ್ಯದ ರಜೆ ಮತ್ತೊಂದು ಕಡೆ ಹಾಸನಾಂಬೆ ಜಾತ್ರಾ (Hasanamba Jatra) ಮಹೋತ್ಸ ಕೂಡ ಶುರುವಾಗಿರುವ ಹಿನ್ನೆಲೆ ಬೆಂಗಳೂರು ಮಂದಿ ಈಗ ಹಾಸನದತ್ತ ಹೊರಟಿದ್ದಾರೆ. ವಿಶೇಷವಾಗಿ ಶನಿವಾರ ಸಂಜೆ ಕೆಲಸ ಮು...

ಹಾಸನಾಂಬ ಜಾತ್ರಾ ಮಹೋತ್ಸವ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ದೇವಿಯ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಹಾಸನದತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಿದೆ, ಇದರಲ್ಲಿ 65ಕ್ಕೂ ಹೆಚ್ಚು ನಾನ್‌ಸ್ಟಾಪ್ ಬಸ್‌ಗಳು ಸೇರಿವೆ. ಅಕ್ಟೋಬರ್ 30ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನವೆಂಬರ್ 11ರವರೆಗೆ ಈ ಜಾತ್ರಾ ಮಹೋತ್ಸವ ನಡೆಯಲಿದೆ.




