ಬಳ್ಳಾರಿ: ಸುರಿದ ಮಳೆಗೆ ಜಲಾವೃತವಾದ ಅಂಡರ್‌ಪಾಸ್, ತೀವ್ರ ಸಂಚಾರ ಅಸ್ತವ್ಯಸ್ತ
ಬಳ್ಳಾರಿ: ಸುಡುಬಿಸಿಲಿನಿಂದ ಕಾದು ಕಾದ ಕಬ್ಬಿಣದಂತಾಗಿದ್ದ ಗಣಿ ಜಿಲ್ಲೆ ಬಳ್ಳಾರಿಗೆ(Ballari) ಸುಮಾರು ಎರಡು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಮಳೆರಾಯ(Rain) ತಂಪೆರೆದಿದ್ದಾನೆ. ಶುಕ್ರವಾರ ನಗರದಲ್ಲಿ ಸುಮಾರು ಒಂದು ಗ...

ಸುಮಾರು ಎರಡು ತಿಂಗಳ ಕಾಲ ಬಿಸಿಲ ಬೇಗೆಯಲ್ಲಿದ್ದ ಬಳ್ಳಾರಿ ನಗರದಲ್ಲಿ ಶುಕ್ರವಾರ ಒಂದು ಗಂಟೆ ಕಾಲ ಭಾರೀ ಮಳೆ ಸುರಿಯಿತು. ಇದರಿಂದಾಗಿ ಎಸ್.ಎನ್. ಪೇಟೆ ಬಳಿಯ ರೈಲ್ವೆ ಅಂಡರ್‌ಪಾಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ರಸ್ತೆಯಲ್ಲೂ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದರು. ಪದೇ ಪದೆ ಇಂತಹ ಸಮಸ್ಯೆ ಎದುರಾಗುತ್ತಿದ್ದರೂ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




