ಬಳ್ಳಾರಿ: ಮಾಜಿ ಶಾಸಕ ಸುರೇಶ್ ಬಾಬು ಬಂಧನಕ್ಕೆ ಬಿಹಾರ ನ್ಯಾಯಾಲಯದಿಂದ ವಾರಂಟ್ ಜಾರಿ
ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬು ಅವರಿಗೆ ಬಿಹಾರದ (Bihar) ಈಸ್ಟ್ ಚಂಪಾರಣ್ ಕೋರ್ಟ್‌ನಿಂದ ನಾನ್ ಬೇಲೇಬಲ್ ವಾರಂಟ್ (Non Bailable Warrant) ಜಾರಿಯಾಗಿದೆ. ಸುರೇಶ್ ಬಾಬು ಅವರ ಬಂಧನಕ್ಕಾಗಿ...

ಬಿಹಾರದ ಈಸ್ಟ್ ಚಂಪಾರಣ್ ನ್ಯಾಯಾಲಯವು ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಈ ಸಂಬಂಧ ಅವರನ್ನು ಬಂಧಿಸಲು ಬಿಹಾರ ಪೊಲೀಸರ ತಂಡವೊಂದು ಬಳ್ಳಾರಿಗೆ ಬಂದಿದ್ದು, ಸ್ಥಳೀಯ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅವರ ನೆರವು ಕೋರಿದೆ. ಈ ವಿಚಾರವಾಗಿ ಎಸ್ಪಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಆದರೆ, ಸುರೇಶ್ ಬಾಬು ಅವರ ವಿರುದ್ಧ ಯಾವ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇದರಿಂದಾಗಿ ಮಾಜಿ ಶಾಸಕರು ಬಂಧನದ ಭೀತಿಯಲ್ಲಿದ್ದಾರೆ.




