ಬಳ್ಳಾರಿ: ಲಕ್ಷ್ಮೀ ಪೂಜೆ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 11 ಮಂದಿ ಬಂಧನ
ಬಳ್ಳಾರಿ: ಲಕ್ಷ್ಮೀ ಪೂಜೆ(Lakshmi Puja) ಮತ್ತು ‘ಹಣದ ಮಳೆ’ಯ ಹೆಸರಿನಲ್ಲಿ ಮುಗ್ಧ ಯುವತಿಯರನ್ನು ವಂಚಿಸಿ, ಲೈಂಗಿಕ ದೌರ್ಜನ್ಯ ಹಾಗೂ ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ(Prostitution Racket) ಬಳಸಿಕೊಳ್ಳುತ್ತಿದ್ದ ಬೃಹ...

ಬಳ್ಳಾರಿ ಪೊಲೀಸರ ಅಕ್ಕ ಪಡೆ ತಂಡವು ಲಕ್ಷ್ಮೀ ಪೂಜೆಯ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಅಂತರಾಜ್ಯ ಜಾಲವನ್ನು ಭೇದಿಸಿದೆ. ಸುಮಾರು ಎರಡು ತಿಂಗಳ ಕಾಲ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಆರೋಪಿಗಳು ಹಣದ ಮಳೆಯ ಆಮಿಷವೊಡ್ಡಿ ಯುವತಿಯರನ್ನು ಸೆಳೆದು ಬೆತ್ತಲೆ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಬಳ್ಳಾರಿ, ಚಿಕ್ಕಮಗಳೂರು, ಮೈಸೂರು ಮತ್ತು ಆಂಧ್ರಪ್ರದೇಶದ ಅನಂತಪುರದಲ್ಲಿ ಹರಡಿದ್ದ ಈ ಜಾಲದ ಮುಖ್ಯ ಸೂತ್ರಧಾರ ಸ್ವಾಮೀಜಿಗಾಗಿ ಹುಡುಕಾಟ ನಡೆದಿದೆ.




