ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಮದುವೆಗೆ ಬರುವುದಾಗಿ ಹೇಳಿದ್ದ ಸುಧೀರ್ ಕೆ ಸಾವು
ದಾವಣಗೆರೆ: ಉತ್ತರಾಖಂಡದಲ್ಲಿ (Uttarakhand) ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ (Helicopter Crash) ಸಾವನ್ನಪ್ಪಿದ ಹೈಕೋರ್ಟ್ ನ್ಯಾಯವಾದಿ ಸುಧೀರ್.ಕೆ ಅವರನ್ನು ಸಂಬಂಧಿಕರು ನೆನೆಸಿಕೊಂಡು ಕಂಬನಿ ಮಿಡಿದಿದ್ದಾರೆ...

ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಹೈಕೋರ್ಟ್ ವಕೀಲ ಸುಧೀರ್ ಕೆ ಮೃತಪಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದವರಾದ ಸುಧೀರ್, ಅಕ್ಟೋಬರ್ 31 ರಂದು ನಡೆಯಲಿದ್ದ ತಮ್ಮ ಚಿಕ್ಕಪ್ಪನ ಮಗನ ಮದುವೆಗೆ ಬರುವುದಾಗಿ ಕುಟುಂಬಸ್ಥರಿಗೆ ಮಾತು ನೀಡಿದ್ದರು. ಆದರೆ, ವಿಧಿಯಾಟದಿಂದ ಅವರು ಮೃತಪಟ್ಟಿದ್ದು, ಈ ಸುದ್ದಿ ಕೇಳಿ ತ್ಯಾವಣಿಗೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಹಾಲಯ ಅಮಾವಾಸ್ಯೆಯಂದು ಗ್ರಾಮಕ್ಕೆ ಭೇಟಿ ನೀಡಿದ್ದ ಸುಧೀರ್ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತಿದ್ದರು ಎಂದು ಸಂಬಂಧಿಕರು ಸ್ಮರಿಸಿದ್ದಾರೆ.




