ದಾವಣಗೆರೆ: ಮದ್ಯದ ಹಣಕ್ಕಾಗಿ ತಾಯಿಯನ್ನೇ ಕೊಂದ ಮಗ
ದಾವಣಗೆರೆ: ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಹೆತ್ತ ತಾಯಿಯನ್ನೇ (Mother) ಪಾಪಿ ಮಗನೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚನ್ನಗಿರಿ (Channagiri) ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದ...

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಮದ್ಯಕ್ಕಾಗಿ ಹಣ ನೀಡದ ತಾಯಿ ಬುಳ್ಳಮ್ಮ ಅವರನ್ನು ಮಗ ಹನುಮಂತ ಹತ್ಯೆ ಮಾಡಿದ್ದಾನೆ. ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಏಳು ವರ್ಷ ಜೈಲುವಾಸ ಅನುಭವಿಸಿದ್ದ ಹನುಮಂತ, ಮೂರು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ತನ್ನ ಬಳಿ ಇದ್ದ ಹಣವನ್ನು ನೀಡಲು ತಾಯಿ ನಿರಾಕರಿಸಿದಾಗ ಆಕ್ರೋಶಗೊಂಡ ಆರೋಪಿ, ದೊಣ್ಣೆಯಿಂದ ತಲೆಯ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಮೃತದೇಹವನ್ನು ಬೆಡ್ ಶೀಟ್‌ನಲ್ಲಿ ಮುಚ್ಚಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಗ್ರಾಮಸ್ಥರು ಹಿಡಿದು ಬಸವಪಟ್ಟಣ ಪೊಲೀಸರಿಗೆ ಒಪ್ಪಿಸಿದ್ದಾರೆ.




