ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಉತ್ತರ ಕನ್ನಡದ ಸಿದ್ದಾಪುರದಲ್ಲಿ ಅಡಿಕೆ ತೋಟಕ್ಕೆ ವಿಚಿತ್ರ ಕೀಟಬಾಧೆ

– ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ವಿಚಿತ್ರ ಕೀಟದ ಹಾವಳಿ ಉತ್ತರ ಕನ್ನಡ: ಬಂಗಾರದ ಬೆಳೆ ಎಂದೇ ಖ್ಯಾತಿ ಗಳಿಸಿರುವ ಅಡಿಕೆಗೆ ಒಂದಲ್ಲಾ ಒಂದು ರೋಗಬಾಧೆ ಬರುತ್ತಲೇ ಇರುತ್ತವೆ. ಆದರೇ ಇದೀಗ ಉತ್ತರ ಕನ್ನಡ ಜಿಲ್...

· ಉತ್ತರ ಕನ್ನಡ
ಅಡಿಕೆಗೆ ವಿಚಿತ್ರ ಕೀಟಬಾಧೆ – ಕೆಲವೇ ದಿನದಲ್ಲಿ ಎಕರೆಗಟ್ಟಲೇ ಹಸಿರು ತಿನ್ನುವ ಕೀಟಕ್ಕೆ ಬೇಕಿದೆ ಪರಿಹಾರ
ಹಂಚಿಕೊಳ್ಳಿ:

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಅಡಿಕೆ ಮರಗಳಿಗೆ ಹೊಸ ರೀತಿಯ ಕೀಟವೊಂದು ದಾಳಿ ನಡೆಸುತ್ತಿದ್ದು, ರೈತರನ್ನು ಕಂಗಾಲಾಗಿಸಿದೆ. ಎಲೆಗಳ ಹಿಂಭಾಗದಲ್ಲಿ ಬಲೆ ಹೆಣೆಯುವ ಈ ಕೀಟಗಳು ಎಲೆಗಳನ್ನು ತಿಂದು ಮರಗಳನ್ನು ನಾಶ ಮಾಡುತ್ತಿವೆ. ಈಗಾಗಲೇ ಸುಮಾರು 20 ಎಕರೆ ಪ್ರದೇಶದ ತೋಟಗಳು ಹಾನಿಗೀಡಾಗಿವೆ. ಈ ಕೀಟವು ಅಡಿಕೆ ಜೊತೆಗೆ ಬಾಳೆ ಮತ್ತು ಕಾಡಿನ ಮೃದು ಎಲೆಗಳನ್ನು ಸೇವಿಸುತ್ತಿದೆ. ತೋಟಗಾರಿಕಾ ಇಲಾಖೆಯು ಕ್ಲೋರಾಂಟ್ರಾನಿಲಿಪ್ರೋಲ್ ಕೀಟನಾಶಕ ಬಳಸಲು ಸೂಚಿಸಿದ್ದರೂ, ಕೀಟಗಳ ನಿಯಂತ್ರಣ ಕಷ್ಟಕರವಾಗಿದೆ. ವಿಜ್ಞಾನಿಗಳು ಈ ಕೀಟವನ್ನು ಅಕ್ರಿಯಾ ಪ್ರಭೇದಕ್ಕೆ ಸೇರಿದ ಚಿಟ್ಟೆ ಎಂದು ಗುರುತಿಸಿದ್ದು, ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: