ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ಸಿಎಂ ಅಂಗಳಕ್ಕೆ ತಲುಪಿದ ಕೋಲಾರ, ಚಿಕ್ಕಬಳ್ಳಾಪುರ `ಕೈ’ ಶಾಸಕರ ಜಟಾಪಟಿ – ಜೋರಾಯ್ತು ಪ್ರದೀಪ್ ಈಶ್ವರ್ vs ಎಂ.ಸಿ ಸುಧಾಕರ್ ಫೈಟ್!

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರ ಅಂಗಳಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರ ಕಿತ್ತಾಟ ತಲುಪಿದೆ. ಎರಡು ಪ್ರತ್ಯೇಕ ಕಿತ್ತಾಟಗಳು ಸಿಎಂ ಡಿಕೆಶಿಗೆ ತಲೆನೋವಾಗಿದೆ. ಒಂದ್ಕಡೆ...

· ಚಿಕ್ಕಬಳ್ಳಾಪುರ
ಸಿಎಂ ಅಂಗಳ ತಲುಪಿದ ಕೋಲಾರ, ಚಿಕ್ಕಬಳ್ಳಾಪುರ `ಕೈ’ ಶಾಸಕರ ಕಿತ್ತಾಟ – ಜೋರಾಯ್ತು ಪ್ರದೀಪ್ ಈಶ್ವರ್ vs ಎಂ.ಸಿ ಸುಧಾಕರ್ ಫೈಟ್
ಹಂಚಿಕೊಳ್ಳಿ:

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರ ಅಂಗಳಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರ ಕಿತ್ತಾಟ ತಲುಪಿದೆ. ಎರಡು ಪ್ರತ್ಯೇಕ ಕಿತ್ತಾಟಗಳು ಸಿಎಂ ಡಿಕೆಶಿಗೆ ತಲೆನೋವಾಗಿದೆ.

ಒಂದ್ಕಡೆ ಕೋಲಾರದಲ್ಲಿ ರೂಪಕಲಾ ಶಶಿಧರ್ vs ಬಂಗಾರಪೇಟೆ ನಾರಾಣಸ್ವಾಮಿ ಮತ್ತು ಇತರರು ಆದ್ರೆ, ಇನ್ನೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ, ಚಿಂತಾಮಣಿ ಶಾಸಕ ಎಂ.ಸಿ ಸುಧಾಕರ್ (MC Sudhakar) vs ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕಿತ್ತಾಟ ಜೋರಾಗಿದೆ.

ಕೋಲಾರ ಡಿಸಿಸಿ ಬ್ಯಾಂಕ್ ವಿಚಾರವಾಗಿ ಇವತ್ತು ಕೋಲಾರ ಜಿಲ್ಲೆ ಶಾಸಕರಾದ ನಂಜೇಗೌಡ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್‌, ಶಾಸಕಿ ರೂಪಕಲಾ ಶಶಿಧರ್, ಚಿಕ್ಕಬಳ್ಳಾಪುರ ಜಿಲ್ಲೆ ಶಾಸಕರಾದ ಎಂ.ಸಿ ಸುಧಾಕರ್, ಸುಬ್ಬಾರೆಡ್ಡಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಇದೇ ವೇಳೆ ಕೋಲಾರ ಕಿತ್ತಾಟದ ಬಗ್ಗೆ ಸಿಎಂ ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಮಾಜಿ ಸಚಿವ, ಹಾಲಿ ಚಿಂತಾಮಣಿ ಶಾಸಕ ಸುಧಾಕರ್ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಹಿರಂಗವಾಗಿ ಸಮರ ಸಾರಿದ್ದು, ಆಸ್ತಿ ಬಗ್ಗೆ ಸ್ಫೋಟಕ ಮಾಹಿತಿ ಹೊರಗೆ ಹಾಕ್ತೀನಿ ಅಂತಾ ನಿನ್ನೆ ಟ್ವೀಟ್ ಮಾಡಿದ್ದು, ಕಿತ್ತಾಟ ಇನ್ನಷ್ಟು ಜೋರಾಗಲು ಕಾರಣವಾಗಿದೆ.

ಹಂಚಿಕೊಳ್ಳಿ: