ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಸಕಲೇಶಪುರ: ಟೈಯರ್ ಸಿಡಿದು ಲಾರಿ ಪಲ್ಟಿ, ರಸ್ತೆ ಬಿದ್ದಿದ್ದ ಸಿಮೆಂಟ್ ಮೂಟೆಗಳ ಲೂಟಿ

ಹಾಸನ: ಟೈಯರ್ ಬ್ಲಾಸ್ಟ್ ಆಗಿ ಸಿಮೆಂಟ್ ತುಂಬಿದ್ದ ಟ್ರಕ್‌ ಪಲ್ಟಿಯಾದ ಘಟನೆ ಸಕಲೇಶಪುರದ (Sakleshpura) ಗುಳಗಳಲೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಅಪಘಾತದಿಂದ (Accident) ಜಾರ್ಖಂಡ್ ಮೂಲದ ಲಾ...

· ಹಾಸನ
ಟೈಯರ್‌ ಬ್ಲಾಸ್ಟ್‌ ಆಗಿ ಟ್ರಕ್‌ ಪಲ್ಟಿ – ನೂರಾರು ಸಿಮೆಂಟ್‌ ಮೂಟೆ ಹೊತ್ತೊಯ್ದ ಜನ
ಹಂಚಿಕೊಳ್ಳಿ:

ಹಾಸನದ ಸಕಲೇಶಪುರ ಸಮೀಪದ ಗುಳಗಳಲೆ ಗ್ರಾಮದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಲಾರಿಯ ಟೈಯರ್ ಒಡೆದು ವಾಹನ ಪಲ್ಟಿಯಾಗಿದೆ. ಈ ಅವಘಡದಲ್ಲಿ ಜಾರ್ಖಂಡ್ ಮೂಲದ ಚಾಲಕ ರಾಜೇಶ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ನಂತರ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಸಿಮೆಂಟ್ ಚೀಲಗಳನ್ನು ಸಾರ್ವಜನಿಕರು ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಘಟನೆ ನಡೆದು ಒಂದು ದಿನ ಕಳೆದರೂ ಮಾಲೀಕರು ಬಾರದ ಕಾರಣ ರಾತ್ರಿಯ ವೇಳೆ ಅಪರಿಚಿತರು ಸಿಮೆಂಟ್ ಮೂಟೆಗಳನ್ನು ಕಳ್ಳತನ ಮಾಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ: