ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ರಾಯಚೂರು | ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ!

ರಾಯಚೂರು: ಕೇಂದ್ರ ಬರ ಅಧ್ಯಯನ ತಂಡ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ರಾಯಚೂರಿನಲ್ಲಿ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ ಮಾಡಿದೆ. ಸಂಜೆಯಾಗಿದ್ದರಿಂದ ಜಮೀನಿನಲ್ಲಿ ಮೊಬೈಲ್ ಟಾರ್ಚ್ ಹಾಕಿ ಬೆಳೆ ವೀಕ್ಷಣೆ ಮಾಡಿ ಮಾಹಿತ...

· ರಾಯಚೂರು
ರಾಯಚೂರು | ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ
ಹಂಚಿಕೊಳ್ಳಿ:

ರಾಯಚೂರು: ಕೇಂದ್ರ ಬರ ಅಧ್ಯಯನ ತಂಡ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ರಾಯಚೂರಿನಲ್ಲಿ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ ಮಾಡಿದೆ. ಸಂಜೆಯಾಗಿದ್ದರಿಂದ ಜಮೀನಿನಲ್ಲಿ ಮೊಬೈಲ್ ಟಾರ್ಚ್ ಹಾಕಿ ಬೆಳೆ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿದೆ.

ರಾತ್ರಿಯಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೇಂದ್ರದ ತಂಡ ಬೆಳೆ ವೀಕ್ಷಣೆ ಮಾಡಿದೆ. ಸಂಜೆ ಕತ್ತಲು ಆವರಿಸಿದ ಹಿನ್ನೆಲೆಯಲ್ಲಿ ಮೊಬೈಲ್ ಟಾರ್ಚ್‌ನಲ್ಲಿ ವೀಕ್ಷಣೆ ಮಾಡಿತು. ರಾಯಚೂರಿಗೆ ಮಧ್ಯಾಹ್ನ ಆಗಮಿಸಿದ್ದ ತಂಡ ರಾತ್ರಿ ವರೆಗೆ ಜಿಲ್ಲೆಯ ವಿವಿಧೆಡೆ ಬರ ಅಧ್ಯಯನ ನಡೆಸಿತು.

ದೇವದುರ್ಗ, ಲಿಂಗಸೂಗೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಬರ ಅಧ್ಯಯನ ಮಾಡಲಾಗಿದೆ. ಮೆಣಸಿನಕಾಯಿ, ಹತ್ತಿ, ತೊಗರಿ ಬೆಳೆ ವೀಕ್ಷಣೆ ಮಾಡಿ ಮಾಹಿತಿ ಪಡೆದಿದೆ.ಇದನ್ನೂ ಓದಿ: ವೋಟ್‌ಚೋರಿಗೆ SIR ದುರ್ಬಳಕೆ..? – ಬೆಂಗಳೂರಿನ ಜನರಿಗೂ ಸಿಎಂ ಡಿಕೆಶಿ ಎಚ್ಚರಿಕೆ

ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ತೊಗರಿ ಬೆಳೆ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು.

ಮಳೆ ಕೊರತೆಯಿಂದಾಗಿ ಈರುಳ್ಳಿ, ಹತ್ತಿ ಮತ್ತು ತೊಗರಿ ಬೆಳೆ ಹಾನಿಯಾದ ಬಗ್ಗೆ ರೈತರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರೈತರು ಹಾಗೂ ಅಧಿಕಾರಿಗಳಿಂದ ಪಡೆದ ಮಾಹಿತಿಯನ್ನು ಕೇಂದ್ರ ತಂಡ ನಮೂದಿಸಿಕೊಂಡಿದೆ.

ಹಂಚಿಕೊಳ್ಳಿ: