ರಾಯಚೂರಿನ ವೀರ ಹನುಮಾನ್ ಮತ್ತು ಈರಣ್ಣ ರುದ್ರಾಕ್ಷಿಗೆ ರಾಜ್ಯೋತ್ಸವ ಪ್ರಶಸ್ತಿ
ರಾಯಚೂರು: ಬಿಸಿಲನಾಡು ರಾಯಚೂರಿನ (Raichuru) ಇಬ್ಬರು ಸಾಧಕರು 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ವೀರ ಹನುಮಾನ್, ಜಾನಪದ ಕ್ಷೇತ್ರದಲ್ಲಿ ಈರಣ್ಣ ರುದ್ರಾಕ್ಷಿ...

2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರಿನ ಇಬ್ಬರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ವಿಭಾಗದಲ್ಲಿ ನಗರದ ನಿವೃತ್ತ ಶಿಕ್ಷಣಾಧಿಕಾರಿ ವೀರ ಹನುಮಾನ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ಹೈಕು ಕವಿತಾ ಪ್ರಕಾರವನ್ನು ಪರಿಚಯಿಸಿದ್ದು, ನಾಲ್ಕು ದಶಕಗಳ ಸಾಹಿತ್ಯ ಸೇವೆಯನ್ನು ಗುರುತಿಸಿ ಸರ್ಕಾರ ಈ ಗೌರವ ನೀಡಿದೆ. ಇನ್ನು ಜಾನಪದ ಕ್ಷೇತ್ರದಲ್ಲಿ ದೇವದುರ್ಗದ ಈರಣ್ಣ ರುದ್ರಾಕ್ಷಿ ಅವರು ಆಯ್ಕೆಯಾಗಿದ್ದಾರೆ. ಅಲೆಮಾರಿ ಸಮುದಾಯದ ಇವರು ಕಳೆದ ಐದು ದಶಕಗಳಿಂದ ಹಗಲು ವೇಷಗಾರಿಕೆ ಮತ್ತು ಜಾನಪದ ರಂಗಭೂಮಿಯಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.




