ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ರಾಮನಗರ: ವಂಶವೃಕ್ಷಕ್ಕೆ ಲಂಚ ಪಡೆಯುತ್ತಿದ್ದ ಕೂಟಗಲ್ ಉಪ ತಹಶೀಲ್ದಾರ್ ಲೋಕಾಯುಕ್ತ ಬಂಧನ

ರಾಮನಗರ: ವಂಶವೃಕ್ಷ ಪ್ರಮಾಣಪತ್ರಕ್ಕೆ ಸಹಿ ಹಾಕುವುದಕ್ಕಾಗಿ ಅರ್ಜಿದಾರರಿಂದ ತಮ್ಮ ಕಚೇರಿಯಲ್ಲೇ ₹13 ಸಾವಿರ ಲಂಚ ‍ಪಡೆಯುತ್ತಿದ್ದ ತಾಲ್ಲೂಕಿನ ಕೂಟಗಲ್ ಹೋಬಳಿಯ ಉಪ ತಹಶೀಲ್ದಾರ್ ಸೋಮೇಶ್ ಅವರನ್ನು ಹಣದ ಸಮೇತ ಲೋಕಾಯುಕ್ತ ಪ...

· ಬೆಂಗಳೂರು ನಗರ
ವಂಶವೃಕ್ಷ ನೀಡಲು ₹13 ಸಾವಿರ ಲಂಚ: ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
ಹಂಚಿಕೊಳ್ಳಿ:

ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಉಪ ತಹಶೀಲ್ದಾರ್ ಸೋಮೇಶ್ ಅವರು ವಂಶವೃಕ್ಷ ಪ್ರಮಾಣಪತ್ರಕ್ಕೆ ಸಹಿ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೊಂಬೇಗೌಡನದೊಡ್ಡಿಯ ರಾಕೇಶ್ ಎಂಬುವರು ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಸಹಿ ಹಾಕಲು ಸೋಮೇಶ್ 15 ಸಾವಿರ ರೂಪಾಯಿ ಕೇಳಿದ್ದರು. ನಂತರ 13 ಸಾವಿರ ರೂಪಾಯಿಗೆ ಒಪ್ಪಿಕೊಂಡಿದ್ದ ಅಧಿಕಾರಿ, ಬುಧವಾರ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಇನ್‌ಸ್ಪೆಕ್ಟರ್ ವಿಜಯಕುಮಾರ್ ನೇತೃತ್ವದ ತಂಡವು ಈ ಕಾರ್ಯಾಚರಣೆಯನ್ನು ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದೆ.

ಹಂಚಿಕೊಳ್ಳಿ: