ಮುಖ್ಯ ವಿಷಯಕ್ಕೆ ಹೋಗಿ
The Karnataka Today
8 Oct
ಸುದ್ದಿ
ಕರ್ನಾಟಕ

ರಾಜ್ಯದ 217 ತಾಲೂಕುಗಳಲ್ಲಿ ಭೀಕರ ಬರ – ವಿವಿಧ ಜಿಲ್ಲೆಗಳಲ್ಲಿ ಕೇಂದ್ರದ ತಂಡದಿಂದ ಬರ ಅಧ್ಯಯನ!

ಬೆಂಗಳೂರು: ರಾಜ್ಯದ 217 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಈ ಹೊತ್ತಿನಲ್ಲಿ ಕೇಂದ್ರದ ಬರ ಅಧ್ಯಯನ (Drought Study) ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸುತ್ತಿದೆ. ಇಂದು (ಭಾನುವಾರ) ಯಾದಗಿರಿ, ಚಿತ್ರದುರ್ಗ, ಹಾಸನ...

· ರಾಯಚೂರು
ರಾಜ್ಯದ 217 ತಾಲೂಕುಗಳಲ್ಲಿ ಬರ ತಾಂಡವ – ವಿವಿಧ ಜಿಲ್ಲೆಗಳಲ್ಲಿ ಕೇಂದ್ರದ ತಂಡದಿಂದ ಬರ ಅಧ್ಯಯನ
ಹಂಚಿಕೊಳ್ಳಿ:

ಬೆಂಗಳೂರು: ರಾಜ್ಯದ ಒಟ್ಟು 217 ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರದ Drought Study ತಂಡವು ರಾಜ್ಯದಲ್ಲಿ ಬರ ಅಧ್ಯಯನ ಕೈಗೊಂಡಿದೆ.

ಇಂದು (ಭಾನುವಾರ) ಕೇಂದ್ರ ಸರ್ಕಾರದ (Central Government) ವಿವಿಧ ಸಚಿವಾಲಯಗಳ ಅಧಿಕಾರಿಗಳು ಯಾದಗಿರಿ, ಚಿತ್ರದುರ್ಗ, ಹಾಸನ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗುಂಡಹಳ್ಳಿ ಗ್ರಾಮದಲ್ಲಿ ತೊಗರಿ ಮತ್ತು ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಸಂಭವಿಸಿರುವ Crop Loss ಕುರಿತು ತಂಡದವರು ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಕೆರೆ, ಸಕ್ಕರ ಹಾಗೂ ಚಳ್ಳಕೆರೆ ತಾಲೂಕಿನ ದೊಡ್ಡೇರಿ, ಚಿಕ್ಕಚಲ್ಲೂರು ಗ್ರಾಮಗಳಲ್ಲಿ ಬೆಳೆಗಳ ಸ್ಥಿತಿಗತಿಯನ್ನು ತಂಡ ಪರಿಶೀಲಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಅರಸೀಕೆರೆ ತಾಲೂಕುಗಳಲ್ಲಿ ಡಿಸಿ ಲತಾಕುಮಾರಿ ಅವರು ಕೇಂದ್ರದ ತಂಡಕ್ಕೆ ಬರಗಾಲದ ಪರಿಸ್ಥಿತಿಯನ್ನು ವಿವರಿಸಿದರು. ಇದೇ ರೀತಿ ರಾಯಚೂರಿನ ದೇವದುರ್ಗದಲ್ಲಿ ಕೇಂದ್ರ ತಂಡವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಬೆಳೆಹಾನಿ ಪ್ರದೇಶಗಳನ್ನು ವೀಕ್ಷಿಸಿತು.

ಬರದ ಜೊತೆಗೆ ಬಿಸಿಲಿನ ತಾಪವೂ ಹೆಚ್ಚಾಗಿದ್ದು, ವಾಡಿಕೆಗಿಂತ 2ರಿಂದ 6ರಷ್ಟು ತಾಪಮಾನದಲ್ಲಿ ಏರಿಕೆಯಾಗಿದೆ. ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಸಾರ್ವಜನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಹೊರರೋಗಿ ವಿಭಾಗದಲ್ಲಿ ವೃದ್ಧರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ನಗರ – ವಾಡಿಕೆ – ಪ್ರಸ್ತುತ – ವ್ಯತ್ಯಾಸ

ಕಾರವಾರ – 31 ಡಿಗ್ರಿ – 34 ಡಿಗ್ರಿ 3.3

ಹೊನ್ನಾವರ – 30 ಡಿಗ್ರಿ – 33 ಡಿಗ್ರಿ 3

ಕಲಬುರಗಿ – 32 ಡಿಗ್ರಿ – 35 ಡಿಗ್ರಿ 3

ಬೀದರ್ – 31 ಡಿಗ್ರಿ – 34 ಡಿಗ್ರಿ 3

ಧಾರವಾಡ – 29 ಡಿಗ್ರಿ – 33 ಡಿಗ್ರಿ 4

ಹಾವೇರಿ – 29 ಡಿಗ್ರಿ – 35 ಡಿಗ್ರಿ 6

ಬೆಂಗಳೂರು – 28 ಡಿಗ್ರಿ – 30 ಡಿಗ್ರಿ 2

ಚಿತ್ರದುರ್ಗ – 39 ಡಿಗ್ರಿ – 33 ಡಿಗ್ರಿ 4

ಮೈಸೂರು – 29 ಡಿಗ್ರಿ – 32 ಡಿಗ್ರಿ 3

ಹಂಚಿಕೊಳ್ಳಿ: