ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ರಾಜೀವ್‌ ಗಾಂಧಿ ಹತ್ಯೆಯ ಎರಡು ತಿಂಗಳ ಮೊದಲೇ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದರು: ಸೋನಿಯಾ ಗಾಂಧಿ

ನವದೆಹಲಿ: ಮಾಜಿ ಪ್ರಧಾನಿ, ಪತಿ ರಾಜೀವ್‌ ಗಾಂಧಿ ಅವರ ಹತ್ಯೆಯಾಗುವ ಎರಡು ತಿಂಗಳ ಮೊದಲೇ ಪುತ್ರ ರಾಹುಲ್‌ ಗಾಂಧಿ ಕಳವಳ ವ್ಯಕ್ತಪಡಿಸಿದ್ದರು ಎಂಬುದನ್ನು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.ತಮ್ಮ ಆತ್ಮಕಥೆ ʼಬಿಲಾಂಗಿಂಗ...

ರಾಜೀವ್‌ ಹತ್ಯೆಯ ಬಗ್ಗೆ ಎರಡು ತಿಂಗಳು ಮೊದಲೇ ಕಳವಳಗೊಂಡಿದ್ದ ರಾಹುಲ್:‌ ಸೋನಿಯಾ
ಹಂಚಿಕೊಳ್ಳಿ:

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯಾಗುವ ಎರಡು ತಿಂಗಳ ಮುನ್ನವೇ ಪುತ್ರ ರಾಹುಲ್‌ ಗಾಂಧಿ ಭದ್ರತೆಯ ಕುರಿತು ಆತಂಕ ವ್ಯಕ್ತಪಡಿಸಿದ್ದರು ಎಂದು ಸೋನಿಯಾ ಗಾಂಧಿ ತಮ್ಮ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಆತ್ಮಕಥೆಯಲ್ಲಿ ಬರೆದಿದ್ದಾರೆ. ತಂದೆಯ ರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಶೀಘ್ರವೇ ಅಂತ್ಯಕ್ರಿಯೆಗೆ ಬರಬೇಕಾಗಬಹುದು ಎಂದು ರಾಹುಲ್ ಆಗಲೇ ಎಚ್ಚರಿಸಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ರಾಜೀವ್‌ ಗಾಂಧಿ ಮೃತಪಟ್ಟ ಘಟನೆಯನ್ನು ಸೋನಿಯಾ ಗಾಂಧಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಂದು ಪ್ರಿಯಾಂಕಾ ಗಾಂಧಿ ಮೂಲಕ ವಿಷಯ ತಿಳಿದಾಗ ತಾನು ಅನುಭವಿಸಿದ ಆಘಾತ ಮತ್ತು ನೋವಿನ ಕ್ಷಣಗಳನ್ನು ಅವರು ಹಂಚಿಕೊಂಡಿದ್ದಾರೆ.

ಹಂಚಿಕೊಳ್ಳಿ: