ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ರಾಜಾನುಕುಂಟೆ: ಅಡವಿಟ್ಟ ಚಿನ್ನ ಕದ್ದು 35.40 ಲಕ್ಷ ವಂಚಿಸಿದ ಮೌಲ್ಯಮಾಪಕ ಬಂಧನ

ಬೆಂಗಳೂರು: ಬ್ಯಾಂಕ್ ಗ್ರಾಹಕರು ಅಡವಿಟ್ಟಿದ್ದ ಸುಮಾರು ₹1.80 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಲ್ಲದೆ, ಚಿನ್ನ ಅಡವಿಟ್ಟು ಬ್ಯಾಂಕ್‌ಗೆ ₹35.40 ಲಕ್ಷ ವಂಚಿಸಿದ್ದ ಚಿನ್ನದ ಮೌಲ್ಯಮಾಪಕನನ್ನು (ಅಪ್ರೈಸರ್)...

· ಬೆಂಗಳೂರು ನಗರ
ಗ್ರಾಹಕರ ನಂಬಿಕೆಗೆ ದ್ರೋಹ; ಅಡವಿಟ್ಟ ಚಿನ್ನವನ್ನೇ ಕದ್ದು ಹಣ ಮಾಡಿಕೊಂಡ ಬ್ಯಾಂಕ್ ಸಿಬ್ಬಂದಿ, ಬಂಧನ..!
ಹಂಚಿಕೊಳ್ಳಿ:

ರಾಜಾನುಕುಂಟೆಯ ಬ್ಯಾಂಕ್ ಒಂದರಲ್ಲಿ ಮೌಲ್ಯಮಾಪಕನಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಆರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಗ್ರಾಹಕರು ಅಡವಿಟ್ಟಿದ್ದ ಸುಮಾರು 1.198 ಕೆ.ಜಿ ಚಿನ್ನವನ್ನು ಕಳ್ಳತನ ಮಾಡಿ ವಿವಿಧ ಅಂಗಡಿಗಳಲ್ಲಿ ಅಡವಿಟ್ಟು ಹಣ ಪಡೆದಿದ್ದನು. ಅಲ್ಲದೆ, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬ್ಯಾಂಕ್‌ಗೆ 35.40 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಆತ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ: