ಫರೀದ್‌ಕೋಟ್: 7 ರೂಪಾಯಿಯ ಲಾಟರಿ ಟಿಕೆಟ್ ಖರೀದಿಸಿ 1 ಕೋಟಿ ಗೆದ್ದ ಬಿಮ್ಲಾ ದೇವಿ
ಕೂಲಿ ಕಾರ್ಮಿಕ ಕುಟುಂಬದ ಮಹಿಳೆ ಬಿಮ್ಲಾ ದೇವಿ ಅವರು ಗೃಹಬಳಕೆಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಆಗ ಅಲ್ಲಿಯೇ ಇದ್ದ ‘ಸಿಕ್ಕಿಂ ಸರ್ಕಾರಿ ಲಾಟರಿ ಅಂಗಡಿ’ಯಲ್ಲಿ ₹7 ಕೊಟ್ಟು ಲಾಟರಿ ಟಿಕೆಟ್ ಒಂದನ್ನು ಖ...

ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಕೋಟ್ಕಪುರದಲ್ಲಿ ವಾಸಿಸುವ ಬಿಮ್ಲಾ ದೇವಿ ಎಂಬ ಮಹಿಳೆ ಲಾಟರಿ ಮೂಲಕ ಅದೃಷ್ಟದ ಬಾಗಿಲು ತೆರೆದಿದ್ದಾರೆ. ಮಾರುಕಟ್ಟೆಗೆ ತೆರಳಿದ್ದಾಗ ಸಿಕ್ಕಿಂ ಸರ್ಕಾರಿ ಲಾಟರಿ ಅಂಗಡಿಯಲ್ಲಿ ಕೇವಲ 7 ರೂಪಾಯಿ ಕೊಟ್ಟು ಖರೀದಿಸಿದ ಟಿಕೆಟ್ ಅವರಿಗೆ 1 ಕೋಟಿ ರೂಪಾಯಿ ಬಹುಮಾನ ತಂದುಕೊಟ್ಟಿದೆ. ಲಾಟರಿ ಅಂಗಡಿಯ ಮಾಲೀಕ ನರೇಶ್ ಮೋಂಗಾ ವಿಜೇತರಿಗೆ ಸಿಹಿ ಹಂಚಿ ಅಭಿನಂದಿಸಿದ್ದಾರೆ. ಸದ್ಯ ಈ ಕುಟುಂಬವು ಲಾಟರಿ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಅಥವಾ ಹೊಸ ವ್ಯಾಪಾರ ಆರಂಭಿಸಲು ಬಳಸುವ ಕುರಿತು ಚಿಂತನೆ ನಡೆಸಿದೆ.




