ನಾಗ್ಪುರ ಪದವೀಧರರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭಿಜಿತ್ ವಾಂಜಾರಿ ಗೆಲುವು
ನಾಗ್ಪುರ: ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾದ ನಾಗ್ಪುರ ವಿಭಾಗ ಪದವೀಧರರ ಕ್ಷೇತ್ರದದಲ್ಲಿ ಕಾಂಗ್ರೆಸ್‌ನ ಹಾಲಿ ವಿಧಾನಪರಿಷತ್ ಸದಸ್ಯ ಅಭಿಜಿತ್ ವಾಂಜಾರಿ ಬಿಜೆಪಿ ಅಭ್ಯರ್ಥಿಯ ವಿರುದ್ಧ 3,271 ಮತಗಳಿಂದ ಗೆದ್ದಿದ್ದಾರೆ...

ಮಹಾರಾಷ್ಟ್ರದ ನಾಗ್ಪುರ ವಿಭಾಗ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಎಂಎಲ್‌ಸಿ ಅಭಿಜಿತ್ ವಾಂಜಾರಿ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಧಾಕರ ಕೊಹಲೆ ಅವರ ವಿರುದ್ಧ ವಾಂಜಾರಿ ಅವರು 3,271 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಈ ಚುನಾವಣೆಯಲ್ಲಿ ವಾಂಜಾರಿ 67,231 ಮತಗಳನ್ನು ಪಡೆದರೆ, ಸುಧಾಕರ ಕೊಹಲೆ 63,960 ಮತಗಳನ್ನು ಗಳಿಸಿದರು. ಮತ ಎಣಿಕೆಯ ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದ ವಾಂಜಾರಿ, ಅಂತಿಮವಾಗಿ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆಯ ಬಳಿಕ ಜಯಶಾಲಿಯಾದರು.




