ಮುಂಬೈನಲ್ಲಿ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ನೆನಪಿಸಿ ಭಾವುಕರಾದ ನಟಿ ಕರೀನಾ ಕಪೂರ್
ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಟಾಕ್ ಶೋ ‘ಕಾಫಿ ವಿತ್ ಕರಣ್’ ಸೀಸನ್ 9ರ ಇತ್ತೀಚಿನ ಸಂಚಿಕೆಯಲ್ಲಿ ಬಾಲಿವುಡ್ನ ತಾರಾ ದಂಪತಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಅತಿಥಿಗಳಾಗಿ ಭಾಗವಹಿಸಿದ್ದರು.ಇದೇ ವೇಳೆ 202...

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಕರೀನಾ ಕಪೂರ್, 2015ರಲ್ಲಿ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಅಹಿತಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಸೈಫ್ ಅಲಿ ಖಾನ್ ಅವರಿಗೆ 10 ಬಾರಿ ಚಾಕುವಿನಿಂದ ಇರಿದಿದ್ದನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ದಾರೆ. ಗಾಯಗೊಂಡಿದ್ದ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಾವು ಪಟ್ಟ ಪಾಡು ಹಾಗೂ ಆ ಸಂದರ್ಭದಲ್ಲಿ ಮಕ್ಕಳು ಅನುಭವಿಸಿದ ಆತಂಕದ ಕ್ಷಣಗಳನ್ನು ಅವರು ವಿವರಿಸಿದ್ದಾರೆ. ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೈಫ್ ಅವರನ್ನು ಮಗ ತೈಮೂರ್ ಪ್ರಶ್ನಿಸಿದ ರೀತಿ ಹಾಗೂ ಆರೋಪಿಯನ್ನು ಕ್ಷಮಿಸುವಂತೆ ಮಗ ನೀಡಿದ ಸಲಹೆಯನ್ನು ಕರೀನಾ ಭಾವುಕರಾಗಿ ಸ್ಮರಿಸಿದ್ದಾರೆ.




