ಮುಜಾಫರ್‌ನಗರ: 23 ಮರಣದಂಡನೆ ತೀರ್ಪು ನೀಡಿದ್ದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ವರ್ಗಾವಣೆ
ಮುಜಾಫರ್‌ನಗರ: ಕೇವಲ ಆರೇ ತಿಂಗಳಲ್ಲಿ 23 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರನ್ನು ಮುಜಾಫರ್‌ನಗರ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲ...

ಮುಜಾಫರ್‌ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ರವಿಕುಮಾರ್ ದಿವಾಕರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಅವರು 11 ಪ್ರಕರಣಗಳಲ್ಲಿ 23 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುದ್ದಿಯಾಗಿದ್ದರು. ಇವರ ಸ್ಥಾನಕ್ಕೆ ನ್ಯಾಯಾಧೀಶೆ ಶಿವಕುಮಾರಿ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ತ್ವರಿತ ನ್ಯಾಯಾಲಯದಲ್ಲಿದ್ದ 97 ಪ್ರಕರಣಗಳನ್ನು ಹಿಂಪಡೆದ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ರವಿಕುಮಾರ್ ದಿವಾಕರ್ ಅವರು ಪ್ರಶ್ನಿಸಿದ್ದರು.




