ಮಂಗಳೂರಿನ ವ್ಯಕ್ತಿ ಇಸ್ರೇಲ್ನಲ್ಲಿ ನಾಪತ್ತೆ: ಪತ್ತೆಗಾಗಿ ರಾಯಭಾರ ಕಚೇರಿಗೆ ಮನವಿ
ಮಂಗಳೂರು: ಉದ್ಯೋಗಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಮಂಗಳೂರಿನ 41 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಕುಟುಂಬದವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಾಪತ್ತೆ ದೂರು ಸಲ್ಲಿಸಿದ್ದಾರೆ.ಆ ಸಬಂಧ...

ಮಂಗಳೂರಿನ ಕೊಡಕ್ಕಲ್ ನಿವಾಸಿ ಶದ್ರಕ್ ಎಮ್ಯಾನುಯಲ್ ಇಸ್ರೇಲ್ನಲ್ಲಿ ಕಾಣೆಯಾಗಿದ್ದು, ಅವರ ಪತ್ನಿ ಡೈಸಿ ಎಮ್ಯಾನುಯಲ್ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಮೇ 16ರಂದು ಉದ್ಯೋಗಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಶದ್ರಕ್, ಅಕ್ಟೋಬರ್ 16ರ ನಂತರ ಕುಟುಂಬದ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಕುರಿತು ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದಿರುವ ಕುಟುಂಬಸ್ಥರು, ಶದ್ರಕ್ ಅವರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಕಂಪನಿ ಹಾಗೂ ಸ್ಥಳೀಯ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಿ, ಶದ್ರಕ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕೆಂದು ಡೈಸಿ ಮನವಿ ಮಾಡಿದ್ದಾರೆ.




