ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಮಂಡ್ಯದಲ್ಲಿ 100 ಎಕರೆ ಭೂಮಿ ಮಂಜೂರು ಆರೋಪ ಸುಳ್ಳು ಎಂದ ಹೆಚ್‌ಡಿಕೆ ಕಚೇರಿ

– 100 ಎಕ್ರೆ ಜಮೀನು ಕೊಟ್ಟಿದ್ದೇವೆ ಅಂತಾ ಡಿಕೆಶಿ ಸಮ್ಮುಖದಲ್ಲೇ ಹೇಳಿದ್ದ ಸಚಿವ ಚೆಲುವರಾಯಸ್ವಾಮಿ – ಸಚಿವರ ಹೇಳಿಕೆ ಸುಳ್ಳು ಅಂತಾ ಕೇಂದ್ರ ಸಚಿವರ ಕಚೇರಿ ತೀವ್ರ ಅತೃಪ್ತಿ ಮಂಡ್ಯ: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ...

· ಮಂಡ್ಯ
ಮಂಡ್ಯ ARAI ಭೂಮಿ ಹಂಚಿಕೆ ವಿವಾದ | ಭೂಮಿ ಮಂಜೂರಾತಿ ಪತ್ರ ಎಲ್ಲಿ? – ಹೆಚ್‌ಡಿಕೆ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ಪತ್ರ
ಹಂಚಿಕೊಳ್ಳಿ:

ಮಂಡ್ಯದಲ್ಲಿ ಎಆರ್‌ಎಐ ಸಂಸ್ಥೆಗೆ 100 ಎಕರೆ ಜಮೀನು ನೀಡಲಾಗಿದೆ ಎಂದು ಸಚಿವ ಎನ್. ಚೆಲುವರಾಯಸ್ವಾಮಿ ಅವರು ನೀಡಿದ ಹೇಳಿಕೆಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಕಚೇರಿ ನಿರಾಕರಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರ ಕಚೇರಿ, ಭೂಮಿ ಮಂಜೂರಾತಿಯ ಯಾವುದೇ ಅಧಿಕೃತ ದಾಖಲೆಗಳು ಇಲ್ಲದಿರುವುದನ್ನು ಒತ್ತಿಹೇಳಿದೆ. ಸಚಿವರು ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಕೆ.ಆರ್. ರಘುಕುಮಾರ್, ಮಂಜೂರಾತಿ ಪತ್ರದ ಪ್ರತಿಯನ್ನು ಒದಗಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಈ ವಿವಾದವು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ಹಂಚಿಕೊಳ್ಳಿ: