ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಮಂಡ್ಯ: ಕಾಣೆಯಾದ ಮಹಿಳೆ ಜೀವಂತ ಪತ್ತೆ, ಅಮಾಯಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಮಂಡ್ಯ: ಖಾಕಿ ಕಣ್ಣುಮುಚ್ಚಿ ಕುಳಿತರೆ ಅಮಾಯಕರ ಬದುಕು ಹೇಗೆ ನರಕವಾಗುತ್ತೆ ಅನ್ನೋದಕ್ಕೆ ಮಂಡ್ಯ (Mandya) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಸಾಕ್ಷಿಯೊಂದು ಸಿಕ್ಕಿದೆ. ಮಹಿಳೆಯೊಬ್ಬಳು ಕೊಲೆಯಾಗಿದ್ದಾಳೆ, ಶವವೇ ಸಿಕ್ಕಿಲ್ಲ...

· ಮಂಡ್ಯ
ಖಾಕಿ ಯಡವಟ್ಟು, ನರಕ ಕಂಡ ನಿರಪರಾಧಿ – ಕೊಲೆಯಾದ ಮಹಿಳೆ ಜೀವಂತ ಪ್ರತ್ಯಕ್ಷ
ಹಂಚಿಕೊಳ್ಳಿ:

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ 2019ರಲ್ಲಿ ನಾಪತ್ತೆಯಾಗಿದ್ದ ಮಂಜು ಎಂಬಾಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ರಾಜೇಶ್ ಎಂಬಾತನನ್ನು ಬಂಧಿಸಿದ್ದರು. ಕೇವಲ ಒಂದು ಫೋನ್ ಕರೆಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ರಾಜೇಶ್ ಮೇಲೆ ದೌರ್ಜನ್ಯ ಎಸಗಿ ಕೊಲೆ ಪ್ರಕರಣ ದಾಖಲಿಸಿದ್ದರು. ಈ ಕಾರಣದಿಂದಾಗಿ ರಾಜೇಶ್ ಎರಡೂವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು. ಇದೀಗ ವಕೀಲರ ನೆರವಿನಿಂದ ಮಂಜು ನಾಗಮಂಗಲದಲ್ಲಿ ಜೀವಂತವಾಗಿ ಪತ್ತೆಯಾಗಿದ್ದು, ತಾನು ಸ್ವಇಚ್ಛೆಯಿಂದ ಮನೆಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾಳೆ. ರಾಜೇಶ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.

ಹಂಚಿಕೊಳ್ಳಿ: