ಮಲೆ ಮಹದೇಶ್ವರ ಬೆಟ್ಟ: 36 ದಿನಗಳಲ್ಲಿ 2.79 ಕೋಟಿ ರೂ. ಕಾಣಿಕೆ ಸಂಗ್ರಹ
ಚಾಮರಾಜನಗರ: ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hills) ಅ.28ರಂದು ಹುಂಡಿ ಹಣ ಎಣಿಕೆ ನಡೆದಿದ್ದು, 36 ದಿನಗಳ ಅವಧಿಯಲ್ಲಿ 2.79 ಕೋಟಿ ರೂ. ಸಂಗ್ರಹವಾಗಿದೆ. ಮಲೆ ಮಹದೇಶ...

ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ 36 ದಿನಗಳ ನಂತರ ಹುಂಡಿಗಳನ್ನು ತೆರೆದು ಹಣ ಎಣಿಕೆ ಮಾಡಲಾಯಿತು. ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ ಅವರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಿತು. ಭಕ್ತರು ಒಟ್ಟು 2,79,16,048 ರೂ. ನಗದು ಸೇರಿದಂತೆ 19 ಗ್ರಾಂ ಚಿನ್ನ ಮತ್ತು 1 ಕೆಜಿ 415 ಗ್ರಾಂ ಬೆಳ್ಳಿಯ ವಸ್ತುಗಳನ್ನು ಅರ್ಪಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಹುಂಡಿಯಲ್ಲಿ ಚಲಾವಣೆಯಲ್ಲಿಲ್ಲದ 2,000 ಮುಖಬೆಲೆಯ ನೋಟುಗಳು ಹಾಗೂ ವಿದೇಶಿ ಕರೆನ್ಸಿಗಳು ಸಹ ಪತ್ತೆಯಾಗಿವೆ.




