ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಜ್ರ ಮಹೋತ್ಸವಕ್ಕೆ ಪೂರ್ವಭಾವಿ ಸಭೆ

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಜ್ರ ಮಹೋತ್ಸವ ಹಾಗೂ ಕನ್ನಡ ವಿಷಯ ಕೋರ್ಸ್‌ ಶತಮಾನೋತ್ಸವದ ಅರ್ಥಪೂರ್ಣ ಆಚರಣೆಗೆ ವಿದ್ವಾಂಸರು, ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕ...

· ಮೈಸೂರು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಜ್ರ ಮಹೋತ್ಸವ: ವರ್ಷವಿಡೀ ರಚನಾತ್ಮಕ ಕಾರ್ಯಕ್ರಮ
ಹಂಚಿಕೊಳ್ಳಿ:

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಜ್ರ ಮಹೋತ್ಸವ ಹಾಗೂ ಕನ್ನಡ ವಿಷಯದ ಶತಮಾನೋತ್ಸವ ಆಚರಣೆ ಕುರಿತು ಕುಲಪತಿ ಪ್ರೊ.ಎನ್.ಕೆ. ಲೋಕ್‌ನಾಥ್‌ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು ಮಾತನಾಡಿ, 2027ರ ಜುಲೈಗೆ ಕನ್ನಡ ವಿಷಯ ಕೋರ್ಸ್‌ ನೂರು ವರ್ಷ ಪೂರೈಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ 60 ಪುಸ್ತಕಗಳ ಬಿಡುಗಡೆ, ಲೇಖಕಿಯರ ಸಮಾವೇಶ, ಕುವೆಂಪು ಸಾಹಿತ್ಯದ ಅನುವಾದ ಹಾಗೂ ಶಾಸನಗಳ ಡಿಜಿಟಲೀಕರಣದಂತಹ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಹಿತಿಗಳು ಹಾಗೂ ವಿದ್ವಾಂಸರು ಸಲಹೆ ನೀಡಿದರು.

ಹಂಚಿಕೊಳ್ಳಿ: