ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಕರ್ನಾಟಕ

ಲಖನೌ: ಗಾಯದ ಗುರುತು ಇಲ್ಲದಿದ್ದರೂ ಪೋಕ್ಸೊ ಸಂತ್ರಸ್ತೆಗೆ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಲಖನೌ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಉಲ್ಲೇಖವಿಲ್ಲ ಎಂಬ ಕಾರಣಕ್ಕೆ, ಪೋಕ್ಸೊ ಕಾಯ್ದೆಯಡಿ ಆಕೆಗೆ ನೀಡಬೇಕಾದ ಪರಿಹಾರವನ್ನು ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್...

‘ಗಾಯದ ಉಲ್ಲೇಖವಿಲ್ಲ ಎಂಬ ಕಾರಣಕ್ಕೆ ಪೋಕ್ಸೊ ಅಡಿಯ ಪರಿಹಾರ ನಿರಾಕರಿಸುವಂತಿಲ್ಲ’
ಹಂಚಿಕೊಳ್ಳಿ:

ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಉಲ್ಲೇಖವಿಲ್ಲ ಎಂಬ ಕಾರಣ ನೀಡಿ ಪರಿಹಾರ ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಶೇಖರ್ ಬಿ. ಸರಾಫ್ ಮತ್ತು ಅಮಿತಾಭ್ ಕುಮಾರ್ ರಾಯ್ ಅವರಿದ್ದ ವಿಭಾಗೀಯ ಪೀಠವು, ರಾಣಿ ಲಕ್ಷ್ಮೀಬಾಯಿ ಮಹಿಳಾ ಸಮ್ಮಾನ ಕೋಶ ಯೋಜನೆಯಡಿ ಸಂತ್ರಸ್ತೆಗೆ ತಕ್ಷಣ 3 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ. ವೈದ್ಯಕೀಯ ಪುರಾವೆಗಳ ಕೊರತೆಯನ್ನು ಮುಂದಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಮಿತಿ ಈ ಹಿಂದೆ ಪರಿಹಾರವನ್ನು ತಡೆಹಿಡಿದಿತ್ತು. ಆದರೆ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ದೈಹಿಕ ಗಾಯಗಳು ಇರಲೇಬೇಕೆಂಬ ನಿಯಮವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಂಚಿಕೊಳ್ಳಿ: