ಲಾಸ್ ಏಂಜಲೀಸ್: ರಾಮಾಯಣ ಚಿತ್ರ ವೀಕ್ಷಣೆ ವೇಳೆ ರಾವಣನ ಕೃತ್ಯಕ್ಕೆ ಯಶ್ ಪುತ್ರ ಯಥರ್ವ್ ಕಣ್ಣೀರು
ರಾಮಾಯಣ ಚಿತ್ರದಲ್ಲಿ ರಾವಣನು ಜಟಾಯುವನ್ನು ಕೊಲ್ಲುವ ದೃಶ್ಯ ನೋಡಿದ ಯಶ್ ಪುತ್ರ ಯಥರ್ವ್ ಭಾವುಕರಾಗಿ ಅತ್ತಿದ್ದ ಘಟನೆಯನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ.ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ‘ರಾಮಾಯಣ’ ಸಿನಿಮಾ ನ.5...

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ರಾಮಾಯಣ ಚಿತ್ರದ ಪ್ರೀಮಿಯರ್ ಶೋನಲ್ಲಿ ನಟ ಯಶ್ ತಮ್ಮ ಕುಟುಂಬದೊಂದಿಗೆ ಭಾಗವಹಿಸಿದ್ದರು. ಈ ವೇಳೆ ಚಿತ್ರದಲ್ಲಿ ರಾವಣನು ಜಟಾಯುವನ್ನು ಹತ್ಯೆ ಮಾಡುವ ದೃಶ್ಯವನ್ನು ಗಮನಿಸಿದ ಯಶ್ ಅವರ ಪುತ್ರ ಯಥರ್ವ್ ಭಾವುಕರಾಗಿ ಅತ್ತಿದ್ದಾರೆ. ಈ ಘಟನೆಯನ್ನು ನಟಿ ಸಾಯಿ ಪಲ್ಲವಿ ಸ್ಮರಿಸಿದ್ದು, ಆ ಪಕ್ಷಿಯನ್ನು ಕೊಂದಿದ್ದು ತನಗೆ ಇಷ್ಟವಾಗಲಿಲ್ಲ ಎಂದು ಯಥರ್ವ್ ತಂದೆಯ ಬಳಿ ಹೇಳಿಕೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ. ಬಾಲಕನ ಈ ಸಹಜ ಪ್ರತಿಕ್ರಿಯೆ ಹಾಗೂ ಸಿನಿಮಾ ವಿಮರ್ಶೆಯನ್ನು ಸಾಯಿ ಪಲ್ಲವಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.




