ಕುಮಟಾದ ಯಾಣ ಪ್ರವಾಸಿ ತಾಣಕ್ಕೆ ಪ್ರವೇಶ ಶುಲ್ಕ ಹಾಗೂ ಬಾಟಲ್ ಮೇಲೆ 100 ರೂ. ಠೇವಣಿ
ಕಾರವಾರ: ದೇಶದ ಪ್ರಸಿದ್ಧ ಪ್ರಾಕೃತಿಕ ತಾಣವಾದ ಯಾಣ ಪ್ರದೇಶಕ್ಕೆ ತೆರಳಲು ಇದೀಗ ಪ್ರವಾಸಿಗರ ಪ್ರವೇಶಕ್ಕೆ ಶುಲ್ಕವನ್ನು ನಿಗದಿ ಮಾಡಲಾಗಿದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬರುವ ಯಾಣ (Yana) ಪ...

ಭಾರತೀಯ ಭೂವೈಜ್ಞಾನಿಕ ಸಂಸ್ಥೆಯಿಂದ ರಾಷ್ಟ್ರೀಯ ಭೂಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿರುವ ಕುಮಟಾ ತಾಲೂಕಿನ ಯಾಣಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದೀಗ ಅರಣ್ಯ ಸಮಿತಿಯು ಶುಲ್ಕವನ್ನು ವಿಧಿಸಿದೆ. ಪ್ರತಿ ಪ್ರವಾಸಿಗರಿಗೆ 10 ರೂಪಾಯಿ ಪ್ರವೇಶ ಶುಲ್ಕದ ಜೊತೆಗೆ, ನೀರಿನ ಬಾಟಲ್ಗಳಿಗೆ 100 ರೂಪಾಯಿ ಠೇವಣಿ ಪಡೆಯಲಾಗುತ್ತಿದೆ. ಕತಗಾಲ್ ಅರಣ್ಯ ವ್ಯಾಪ್ತಿಯಲ್ಲಿರುವ ಈ ತಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧವಿದ್ದರೂ, ಪ್ರವಾಸಿಗರು ತರುವ ಬಾಟಲ್ಗಳಿಗೂ ಈ ಮೊತ್ತವನ್ನು ಪಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ಮೂಲಸೌಕರ್ಯಗಳಿಲ್ಲದಿದ್ದರೂ ಏಕಾಏಕಿ ದರ ನಿಗದಿ ಮಾಡಿರುವುದನ್ನು ಸ್ಥಳೀಯರು ಮತ್ತು ಪ್ರವಾಸಿಗರು ತೀವ್ರವಾಗಿ ಖಂಡಿಸಿದ್ದಾರೆ.




